ನವದೆಹಲಿ : ನಾಪತ್ತೆಯಾದ ಭಾರತೀಯ ವಾಯುಸೇನೆಗೆ ಸೇರಿದ ಎಎನ್-32 ವಿಮಾನದ ಶೋಧ ಕಾರ್ಯದಲ್ಲಿ ಅಮೇರಿಕಾದ ನೆರವನ್ನು ಕೇಳಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು ಅಮೇರಿಕಾದ ಸೆಟ್ಲೈಟ್ಗಳೇನಾದರೂ ಎಎನ್-೩೨ ವಿಮಾನದ ಸಿಗ್ನಲ್ಗಳನ್ನು ಸ್ವೀಕರಿಸಿದೆಯೇ ಎಂದು ಪರಿಶೀಲನೆ ನಡೆಸುವ ಸಲುವಾಗಿ ಅಮೇರಿಕಾದ ನೆರವನ್ನು ಕೇಳಿದ್ದೇವೆ ಎಂದಿದ್ದಾರೆ.
ಎಎನ್-32 ವಿಮಾನದ ಏಕಾಏಕಿ ನಾಪತ್ತೆಯಿಂದ ನಾನು ತೀರಾ ಗಲಿಬಿಲಿಗೆ ಒಳಗಾಗಿದ್ದೆ. ಅಧಿಕಾರಿಗಳೂ ಕೂಡಾ ಈ ಬಗ್ಗೆ ವಿಚಲಿತರಾಗಿದ್ದಾರೆ ಎಂದು ಅವೃಉ ಹೇಳಿಕೊಂಡಿದ್ದಾರೆ.
ಎಎನ್-32 ವಿಮಾನಕ್ಕೆ ನಿಖರ ಲೈಫ್ಟೈಮ್ ಇತ್ತು ಎಂಬುದನ್ನು ಸ್ಪಷ್ಟಪಡಿಸಿರುವ ಅವರು ವಿಮಾನ ಅಪಘಾತವನ್ನು ಪಡೆಯಲು ಶಕ್ತಿಮೀರಿದ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದಿದ್ದಾರೆ.
ಹಾರಾಡುವ ಅರ್ಹತೆಗಳನ್ನು ಕಳೆದುಕೊಂಡ ವಿಮಾನಗಳನ್ನು ನಾವು ಹಾರಾಟ ನಡೆಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಎಎನ್-32 ವಿಮಾನದಿಂದ ಎರ್ಮೆಜೆನ್ಸಿ ಸಿಗ್ನಲ್ ಅನ್ನು ನಾವು ಸ್ವೀಕರಿಸಿಲ್ಲ. ರಾಡಾರ್ ಸಂಪರ್ಕವನ್ನು ಅದು ಏಕಾಏಕಿ ಕಳೆದುಕೊಂಡಿತು. ಇದರ ಒಂದೇ ಒಂದು ಸಿಗ್ನಲ್ಗಳೂ ನಮಗೆ ಸಿಕ್ಕಿಲ್ಲ. ಹೀಗಾಗಿ ಅಮೇರಿಕಾದ ಸೆಟ್ಲೈಟ್ ಏನಾದರೂ ಸಿಗ್ನಲ್ಗಳನ್ನು ಸ್ವೀಕರಿಸಿದೆಯೇ ಎಂಬುದನ್ನು ಪರಿಶೀಲನೆ ನಡೆಸಲು ಅಮೇರಿಕಾಗೆ ಮನವಿ ಮಾಡಿದ್ದೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.