ನವದೆಹಲಿ: ಅಹ್ಮದಾಬಾದ್ನ ಹೇಮಚಂದ್ರಾಚಾರ್ಯ ಸಂಸ್ಕೃತ ಪಾಠಶಾಲಾ ‘ಗುರುಕುಲ’ದ ವಿದ್ಯಾರ್ಥಿ ತುಶಾರ್ ತಲವಾಟ್ ಅಂತಾರಾಷ್ಟ್ರೀಯ ಗಣಿತ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದಾನೆ.
ಇಂಡೋನೇಷ್ಯಾದ ಯೋಗ್ಯಾಕರ್ತಾದಲ್ಲಿ ಜುಲೈ 24ರಂದು ಅಬಾಕಸ್ ಹೈಯ್ಯರ್ ಲರ್ನಿಂಗ್ ಆಫ್ ಅರ್ಥ್ಮೆಟಿಕ್ (ಅಲೋಹಾ) ಇಂಟರ್ನ್ಯಾಶನಲ್ ನಡೆಸಿದ ಅಂತಾರಾಷ್ಟ್ರೀಯ ಗಣಿತ ಸ್ಪರ್ಧೆಯಲ್ಲಿ 18 ರಾಷ್ಟ್ರಗಳ 1,300 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತುಷಾರ್ನ ಸಾಧನೆ ದೇಶ ಹೆಮ್ಮೆ ಪಡುವಂತೆ ಮಾಡಿದ್ದಲ್ಲದೆ ಗುರುಕುಲ ಶಿಕ್ಷಣ ವ್ಯವಸ್ಥೆಯತ್ತ ಜನರ ಗಮನ ಸೆಳೆದಿದೆ. ಈತನ ಸಾಧನೆ ಪ್ರಾಚೀನ ವೇದ ಗಣಿತವನ್ನು ವಿಶ್ವ ಮಟ್ಟಕ್ಕೆ ತರುವಂತೆ ಮಾಡಿದೆ ಎಂದು ಆರ್ಎಸ್ಎಸ್ನ ಅಂಗಸಂಸ್ಥೆಯಾಗಿರುವ ಭಾರತೀಯ ಶಿಕ್ಷಣ ಮಂಡಲ (ಬಿಎಸ್ಎಂ)ದ ಜಂಟಿ ಸಂಘಟನಾ ಕಾರ್ಯದರ್ಶಿ ಮುಕುಲ್ ಕಾನಿಟ್ಕರ್ ಹೇಳಿದ್ದಾರೆ.
ತುಷಾರ್ ತಲವಾಟ್ ಈ ಹಿಂದೆ ಹಲವಾರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಕಳೆದ ವರ್ಷ ಅಕ್ಟೋಬರ್ನಲ್ಲಿ ಗುಜರಾತ್ನಲ್ಲಿ ನಡೆದ ಸ್ಪರ್ಧೆಯಲ್ಲಿ 70 ಪ್ರಶ್ನೆಗಳನ್ನು 3 ನಿಮಿಷ 30 ಸೆಕೆಂಡ್ಗಳಲ್ಲಿ ಪೂರ್ಣಗೊಳಿಸಿ 5,300 ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಶಸ್ತಿ ಪಡೆದಿರುವುದಾಗಿ ಬಿಎಸ್ಎಂ ಹೇಳಿದೆ.
ತುಷಾರ್ನ ಅದ್ಭುತ ಸಾಧನೆಗೆ ಶಿಕ್ಷಣ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ತುಷಾರ್ ಭೇಟಿಯಾದ ಸಂದರ್ಭ ಪ್ರಶಂಸಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.