ಶ್ರೀನಗರ: ಪಾಕಿಸ್ಥಾನದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನವಾಜ್ ಶರೀಫ್ ನೇತೃತ್ವದ ಪಾಕಿಸ್ಥಾನ ಮುಸ್ಲಿಂ ಲೀಗ್ (ಪಿಎಂಎಲ್) ಗೆಲುವು ಸಾಧಿಸಿದ್ದು, ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಪಾಕ್ ಆಕ್ರಮಿತ ಕಾಶ್ಮೀರದ ನೀಲಮ್ ಕಣಿವೆಯಲ್ಲಿ ಪಾಕ್ ಧ್ವಜಕ್ಕೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಜನಪ್ರತಿನಿಧಿಗಳ ಬ್ಯಾನರ್ಗೆ ಮಸಿ ಬಳಿದಿದ್ದಾರೆ.
41 ವಿಧಾನಸಭಾ ಕ್ಷೇತ್ರಗಳ ಪೈಕಿ 32ರಲ್ಲಿ ಜಯ ಸಾಧಿಸಿರುವ ಶರೀಫ್ ನೇತೃತ್ವದ ಮುಸ್ಲಿಂ ಲೀಗ್ ಅಕ್ರಮ ಚಟುವಟಿಕೆ ಮೂಲಕ ಜಯ ಸಾಧಿಸಿದೆ. ಇದು ಪಾರದರ್ಶಕವಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಿಒಕೆ ಜನತೆಗೆ ಮತ ಚಲಾಯಿಸಲು ಅವಕಾಶ ನೀಡಿಲ್ಲ. ಪಾಕಿಸ್ಥಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಸಂಸ್ಥೆ ಮತ್ತು ಇತರ ಗುಂಪುಗಳು ಶರೀಫ್ರ ಪಿಎಂಎಲ್ ಪರ ಮತ ಚಲಾಯಿಸಿದ್ದಾರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಫೆಡರಲ್ ಆಡಳಿತ ಪಕ್ಷದ ಪರ ಚುನಾವಣೆಗಳು ನಡೆಯುತ್ತಿವೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಮುಜಫರಾಬಾದ್, ಮೀರ್ಪುರ್, ಕೋಟ್ಲಿ, ಛಿನಾರಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆದಿದ್ದು, ಪಿಎಂಎಲ್ ಸದಸ್ಯರು ಮುಸ್ಲಿಂ ಕಾನ್ಫರೆನ್ಸ್ನ ಓರ್ವ ಬಂಬಲಿಗನ ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.