ಚಂಡೀಗಢ : ಹರಿಯಾಣದ ಚತ್ತಾರ್ ಪ್ರದೇಶದ ಜಿಂದ್ನ ೨೯ ವರ್ಷದ ರೈತ ಜಿತೇಂದರ್ ಚತ್ತಾರ್ ಆದರ್ಶಪ್ರಾಯವಾದ ಕಾರ್ಯವನ್ನು ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆಯನ್ನು ವಿವಾಹವಾಗಿರುವ ಇರುವ ನ್ಯಾಯಕ್ಕಾಗಿ ಆಕೆ ಹೋರಾಟ ನಡೆಸಲಿ ಎಂಬ ಉದ್ದೇಶದಿಂದ ಕಾನೂನು ಶಿಕ್ಷಣ ಪಡೆಯಲು ಲಾ ಕಾಲೇಜಿಗೆ ಸೇರಿಸಿದ್ದಾರೆ.
ಆಕೆ ನ್ಯಾಯಾಂಗದ ಸೇವೆಯನ್ನು ಮಾಡಲಿ. ವಕೀಲೆಯಾಗಿ ಇತರ ಅತ್ಯಾಚಾರ ಸಂತ್ರಸ್ತೆಯರಿಗೆ ಸಹಾಯ ಮಾಡಲಿ ಎಂಬ ಕಾರಣದಿಂದ ಆಕೆಯನ್ನು ಕಾನೂನು ಕಾಲೇಜಿಗೆ ಸೇರಿಸಿದ್ದೇವೆ. ಈಗಾಗಲೇ ನಾವು ‘ಯೂಥ್ ಎಗೈನ್ಸ್ಟ್ ರೇಪ್’ ಎಂಬ ವೇದಿಕೆಯನ್ನು ರಚಿಸಿದ್ದೇವೆ ಎಂದು ಜಿತೇಂದರ್ ಹೇಳಿದ್ದಾರೆ.
ತನ್ನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಓರ್ವ ಆರೋಪಿ ಈಗಲೂ ತಲೆಮರೆಸಿಕೊಂಡಿದ್ದಾನೆ. ಅತನನ್ನು ಹಿಡಿಯುವಲ್ಲಿ ಮಧ್ಯ ಪ್ರವೇಶಮಾಡುವಂತೆ ಹರಿಯಾಣ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿರುವುದಾಗಿ ಜಿತೇಂದರ್ ಹೇಳಿದ್ದಾರೆ.
ಸಂತ್ರಸ್ತೆಯ ಕುಟುಂಬ ಜಿತೇಂದರ್ ಮುಂದೆ ತನ್ನ ಮದುವೆಯ ಪ್ರಸ್ತಾಪವಿಟ್ಟಾಗ, ಸ್ವತಃ ಸಂತ್ರಸ್ತೆಯೇ ಬೇರೆ ಹುಡುಗಿಯನ್ನು ಮದುವೆಯಾಗು, ನಾನಿರುವ ಸ್ಥಿತಿ ನಮ್ಮಿಬ್ಬರ ಸಂಬಂಧಕ್ಕೆ ಧಕ್ಕೆ ತರಬಹುದು ಎಂದು ಆಕೆ ಜಿತೇಂದರ್ ಅವರಿಗೆ ಸಲಹೆ ನೀಡಿದ್ದಳು.
ಆದರೆ ಜಿತೇಂದರ್ ಮತ್ತು ಅವರ ಕುಟುಂಬ ಆಕೆಯನ್ನು ಮದುವೆಯಾಗುವ ನಿರ್ಧಾರದಿಂದ ಹಿಂದಕ್ಕೆ ಸರಿಯದೆ ಇತರರಿಗೆ ಮಾದರಿಯಾಗುವ ಕಾರ್ಯ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.