ವಡೋದರಾ: ಪರಿಸರವನ್ನು ಹಸಿರಾಗಿಸುವ ನಿಟ್ಟಿನಲ್ಲಿ ಗಜರಾತ್ ಅರಣ್ಯ ಇಲಾಖೆ ಈ ಬಾರಿಯ 67ನೇ ‘ವನ ಮಹೋತ್ಸವ’ದ ಸಂದರ್ಭ 10 ಕೋಟಿ ಮರಗಳನ್ನು ನೆಡಲಿದೆ ಎಂದು ರಾಜ್ಯ ಸಚಿವ ಮಂಗುಭಾಯಿ ಪಟೇಲ್ ಹೇಳಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಅವರು 67ನೇ ವನ ಮಹೋತ್ಸವವನ್ನು ಉದ್ಘಾಟಿಸಿದ್ದು, ಮಹಿಸಾಗರ್ ವನವನ್ನು ಪರಿಸರ ಸ್ನೇಹಿ ಪ್ರವಾಸೋದ್ಯಮವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಅರಣ್ಯ ಮತ್ತು ಪರಿಸರ ಅಭಿವೃದ್ಧಿ ಸಚಿವ ಮಂಗುಭಾಯಿ ಪಟೇಲ್ ಹೇಳಿದ್ದಾರೆ.
ಆನಂದ್ ಜಿಲ್ಲೆಯ ವೇರಖಡಿಯಲ್ಲಿ 67ನೇ ವನ ಮಹೋತ್ಸವ ಆರಂಭಿಸಲಾಗಿದ್ದು, ಈಗಾಗಲೇ 4,000 ಮರಗಳನ್ನು ಮತ್ತು 85,000 ಸಸಿಗಳನ್ನು ಮಹಿಸಾಗರ್ ವನದಲ್ಲಿ ನೆಡಲಾಗಿದೆ ಎಂದು ಅವರು ಹೇಳಿದ್ದಾರೆ.
ವಲಸಾದ್ ಜಿಲ್ಲೆಯ ಕಾಪ್ರದ ಗ್ರಾಮದಲ್ಲಿ ಜುಲೈ 30ರಂದು, ಸೂರತ್ನ ಮೋಟಾ ಗ್ರಾಮದಲ್ಲಿ ಆ.4 ಹಾಗೂ ಜಾಮ್ನಗರ್ನ ಭುಚರ್-ಮೋತಿ ಗ್ರಾಮದಲ್ಲಿ ಆ.24ರಂದು ಮರಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಟೇಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.