ನವದೆಹಲಿ : ಸ್ವಾತಂತ್ರ್ಯದ ಬಳಿಕ ಹುತಾತ್ಮರಾದ ಸೈನಿಕರಿಗಾಗಿ ಒಂದು ಅದ್ಭುತ ಯುದ್ಧ ಸ್ಮಾರಕವನ್ನು ನಿರ್ಮಿಸುವ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲು ಭಾರತ ಸರ್ಕಾರ ಹಲವಾರು ವರ್ಷಗಳಿಂದ ವಿಫಲವಾಗಿದೆ.
ಇದೀಗ ನರೇಂದ್ರ ಮೋದಿ ಸರ್ಕಾರ ಇದರ ಕುರಿತು ಚಿಂತನೆ ಆರಂಭಿಸಿದ್ದು, ಈ ಬಗೆಗಿನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದೆ.
ಯುದ್ಧ ಸ್ಮಾರಕ, ಮ್ಯೂಸಿಯಂ ನಿರ್ಮಿಸುವುದು ದೇಶದ ಸೈನಿಕರ ಮತ್ತು ಹಲವರ ಬಹು ಕಾಲದ ಬೇಡಿಕೆಗೆ ಕಳೆದ ಅಕ್ಟೋಬರ್ನಲ್ಲಿ ಕೇಂದ್ರ ಸಂಪುಟ ಅನುಮೋದನೆ ನೀಡಿತ್ತು. ಇದಕ್ಕೆ ೫೦೦ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಈ ರಾಷ್ಟ್ರೀಯ ಯುದ್ಧ ಸ್ಮಾರಕ ಮತ್ತು ಮ್ಯೂಸಿಯಂನ್ನು ವಿನ್ಯಾಸಗೊಳಿಸುವ ಸಲುವಾಗಿ ಇದೀಗ ಭಾರತ ಸರ್ಕಾರ ಗ್ಲೋಬಲ್ ಟೆಂಡರ್ಸ್ಗಳಿಗೆ ಆಹ್ವಾನ ನೀಡಿದೆ.
ಈ ದ್ವಿ ಕಟ್ಟಡಗಳ ವಿನ್ಯಾಸವನ್ನು ನೀಡುವಂತೆ ಜಾಗತಿಕ ಟೆಂಡರ್ಸ್ಗಳಿಗೆ ಆಹ್ವಾನ ನೀಡಲಾಗಿದ್ದು, ಈ ಪ್ರಕ್ರಿಯೆ ಆಗಸ್ಟ್ ಮೊದಲ ವಾರದಿಂದ ಪ್ರಾರಂಭವಾಗಲಿದೆ.
ಆನ್ಲೈನ್ ಮೂಲಕ ವಿನ್ಯಾಸವನ್ನು ಸಲ್ಲಿಕೆ ಮಾಡಬಹುದಾಗಿದೆ. ಇದರಲ್ಲಿನ ಅತ್ಯುತ್ತಮ ವಿನ್ಯಾಸಗಳನ್ನು ಆಯ್ಕೆ ಮಾಡಿ, ಬಳಿಕ ಟೆಂಡರ್ ನೀಡಲಾಗುತ್ತದೆ. ಈ ವರ್ಷದ ಅಂತ್ಯಕ್ಕೆ ವಿನ್ಯಾಸ ಆಯ್ಕೆ ಪ್ರಕ್ರಿಯೆ ಅಂತಿಮಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.