ನವದೆಹಲಿ: ಬಯೋ-ಮೆಟ್ರಿಕ್ ವಿವರಗಳೊಂದಿಗೆ ಭದ್ರತಾ ವೈಶಿಷ್ಟ್ಯಗಳನ್ನೊಳಗೊಂಡ ಹೊಸ ಪೀಳಿಗೆಯ ಇ-ಪಾಸ್ಪೋರ್ಟ್ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ಇ-ಪಾಸ್ಪೋರ್ಟ್ ಪದ್ಧತಿಯು ಡಾಟಾ ಮಾಹಿತಿಗಳನ್ನು ಭದ್ರವಾಗಿ ಇಡಲಿದ್ದು, ನಕಲಿ ಪಾಸ್ಪೋರ್ಟ್ ಸಮಸ್ಯೆಯನ್ನು ನಿಗ್ರಹಿಸಲು ಸಾಧ್ಯವಾಗಲಿದೆ. ಇ-ಪಾಸ್ಪೋರ್ಟ್ ಒಂದು ಎಲೆಕ್ಟ್ರಾನಿಕ್ ಚಿಪ್ನ್ನು ಹೊಂದಲಿದ್ದು, ಇದು ಪಾಸ್ಪೋರ್ಟ್ನಲ್ಲಿರುವ ಮಾಹಿತಿಗಳನ್ನು ಹೊಂದಲಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ. ಸಿಂಗ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ನಾಗರಿಕರಿಗೆ ಇ-ಪಾಸ್ಪೋರ್ಟ್ ನೀಡುವ ಯೋಜನೆಗೆ ಅನುಮೋದನೆ ನೀಡಿದ್ದು, ಇ-ಪಾಸ್ಪೋರ್ಟ್ಗಳಿಗೆ ಎಲೆಕ್ಟ್ರಾನಿಕ್ ಸಂಪರ್ಕರಹಿತ ಚಿಪ್ಗಳ ಮಾದರಿಯನ್ನು ತಯಾರಿಸಲು ಇಂಡಿಯಾ ಸೆಕ್ಯೂರಿಟಿ ಪ್ರೆಸ್ (ಐಎಸ್ಪಿ) ನಾಸಿಕ್ಗೆ ಸೂಚಿಸಿದೆ.
ಈ ನಿಟ್ಟಿನಲ್ಲಿ ಐಎಸ್ಪಿ ನಾಸಿಕ್, ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ಜೊತೆ ಇ-ಪಾಸ್ಪೋರ್ಟ್ ತಯಾರಿಕೆಯಲ್ಲಿ ಅಗತ್ಯವಿರುವ ಎಲೆಕ್ಟ್ರಾನಿಕ್ ಸಂಪರ್ಕರಹಿತ ಮಾದರಿ ಮತ್ತು ಕಾರ್ಯ ವ್ಯವಸ್ಥೆಗೆ ಮೂರು ಹಂತಗಳ ಟೆಂಟರ್ ಕರೆಯಲಿದೆ ಎಂದು ವಿ.ಕೆ. ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.