ನವದೆಹಲಿ: ದೇಶದ ಅಗ್ರ 10 ರೈಲು ನಿಲ್ದಾಣಗಳ ಪಟ್ಟಿಯಲ್ಲಿ ಗುಜರಾತ್ನ 5 ನಿಲ್ದಾಣಗಳು ಸ್ಥಾನ ಪಡೆದಿದ್ದು, ಅತೀ ಹೆಚ್ಚು ಸ್ವಚ್ಛ ನಿಲ್ದಾಣಗಳನ್ನು ಹೊಂದಿದ ಕೀರ್ತಿಗೆ ಪಾತ್ರವಾಗಿದೆ. ಈ ಅಗ್ರ 10 ನಿಲ್ದಾಣಗಳಲ್ಲಿ ಪಂಜಾಬ್ನ ಬಿಯಾಸ್ ರೈಲು ನಿಲ್ದಾಣ ಪ್ರಥಮ ಸ್ಥಾನ ಪಡೆದಿದೆ.
ರೈಲು ನಿಲ್ಧಾಣದ 40 ವಿಭಾಗಗಳಿಗೆ ಭಾರತದ 400 ರೈಲು ನಿಲ್ಧಾಣಗಳ 1 ಲಕ್ಷಕ್ಕೂ ಅಧಿಕ ಪ್ರಯಾಣಿಕರ ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯ ವರದಿಯನ್ನು ರೈಲ್ವೆ ಸಚಿವಾಲಯ ಬಿಡುಗಡೆ ಮಾಡಿದೆ.
ಕೊಳಕು ರೈಲು ನಿಲ್ದಾಣಗಳ ಪಟ್ಟಿಯಲ್ಲಿ ಬಿಹಾರದ ಮಧುಬನಿ ಪ್ರಥಮ ಸ್ಥಾನದಲ್ಲಿದ್ದು, ಇನ್ನಿತರ 5 ನಿಲ್ದಾಣಗಳು ಬಿಹಾರದ್ದೇ ಆಗಿದೆ. ಉತ್ತರ ಪ್ರದೇಶದಲ್ಲಿ 4, ಕರ್ನಾಟಕದ ರಾಯಚೂರು ರೈಲ್ವೆ ನಿಲ್ದಾಣ 4 ನೇ ಸ್ಥಾನ ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.