ಮುಂಬೈ : ಹಿಂದುತ್ವ ಮತ್ತು ಮರಾಠಿ ಅಸ್ಮಿತೆಗಾಗಿ ಶಿವಸೇನೆಯ ಹೋರಾಟಕ್ಕೆ 50 ವರ್ಷಗಳ ಪರಂಪರೆ ಇದೆ ಎಂದಿರುವ ಶಿವಸೇನೆ ಮುಖಂಡ ಉದ್ದವ್ ಠಾಕ್ರೆ ಮುಂದೆಯೂ ಹೋರಾಟವನ್ನು ಮುಂದುವರೆಸಲಿದ್ದೇವೆ ಎಂದಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಶಿವಸೇನೆ ಒಂದು ರಾಜಕೀಯ ಪಕ್ಷ ಮಾತ್ರವಲ್ಲ, ಜನಸಾಮಾನ್ಯನನ ಬಗ್ಗೆ ಕಾಳಜಿ ಹೊಂದಿರುವ ಒಂದು ಸಿದ್ಧಾಂತ ಎಂದಿದ್ದಾರೆ.
ಇಂದಿನ ಸ್ಥಿತಿಗೆ ತಲುಪಲು ಶಿವಸೇನೆ ಕಳೆದ 50 ವರ್ಷಗಳಲ್ಲಿ ಸುದೀರ್ಘ ಹೋರಾಟವನ್ನು ನಡೆಸಿದೆ. ಏನೆಲ್ಲಾ ನಡೆದಿದೆ ಎಂಬುದು ನಿಮ್ಮ ಕಣ್ಣ ಮುಂದೆಯೇ ಇದೆ ಎಂದಿದ್ದಾರೆ. ನಮಗೆ ಹೋರಾಟದ ಇತಿಹಾಸವಿದೆ. ಮಾತ್ರವಲ್ಲ, ಶಿವಸೈನಿಕರು ಮರಾಠಿ ಅಸ್ಮಿತೆಗಾಗಿ ಮಾಡಿದ ತ್ಯಾಗಗಳ ಋಣವೂ ನಮ್ಮ ಮೇಲಿದೆ ಎಂದಿದ್ದಾರೆ.
ಶಿವಸೇನೆ 1966 ರಲ್ಲಿ ಬಾಳ್ ಠಾಕ್ರೆ ಅವರ ನೇತೃತ್ವದಲ್ಲಿ ಸ್ಥಾಪನೆಗೊಂಡಿತ್ತು. ಕಳೆದ ಜೂನ್ನಲ್ಲಿ ಇದು 50 ವರ್ಷವನ್ನು ಪೂರೈಸಿದೆ. ಇದರ ಅಂಗವಾಗಿ ‘Suvarn Mahotsavi Shivsena: 50 Vershachi Ghaud-daud’ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ.
ಇದನ್ನು ಹರ್ಷಲ್ ಪ್ರಧಾನ್ ಮತ್ತು ವಿಜಯಸಾವಂತ್ ಬರೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.