ನವದೆಹಲಿ: ಆಂಡ್ರಾಯ್ಡ್, ಐಒಎಸ್, ಡೆಸ್ಕ್ಟಾಪ್ ಬಳಕೆದಾರರಿಗೆ ಗೂಗಲ್ ತನ್ನ ಗೂಗಲ್ ಮ್ಯಾಪ್ನಲ್ಲಿ ದೃಶ್ಯ ಬದಲಾವಣೆ ಮತ್ತು ಕೆಲವು ಸೇರ್ಪಡೆಯೊಂದಿಗೆ ಜನರು ತಮಗೆ ಬೇಕಾದ ಸ್ಥಳವನ್ನು ಸುಲಭವಾಗಿ ಹುಡುಕುವಂತೆ ಮಾಡಿದೆ.
ಸ್ಪಷ್ಟ ಮತ್ತು ನಿಖರ ಮಾಹಿತಿ ನೀಡಲು ಅನವಶ್ಯಕ ಮಾಹಿತಿಗಳನ್ನು ತೆಗೆಯಲಾಗಿದೆ. ರಸ್ತೆಗಳ ಹೆಸರು, ಸಾರಿಗೆ ಕೇಂದ್ರಗಳು, ನಿರ್ದಿಷ್ಟ ರದೇಶಗಳನ್ನು ಸುಲಭವಾಗಿ ಗುರುತಿಸುವಂತೆ ಸುಧಾರಿತ ನಕ್ಷೆಯನ್ನು ರೂಪಿಸಿದೆ.
ನೈಸರ್ಗಿಕ ಪ್ರದೇಶ ಅಥವಾ ಮಾನವ ನಿರ್ಮಿತ ಕಟ್ಟಡಗಳಾದ ಶಾಲೆ, ಆಸ್ಪತ್ರೆಗಳು, ರಾಷ್ಟ್ರೀಯ ಹೆದ್ದಾರಿಗಳನ್ನು ಪ್ರತ್ಯೇಕಿಸಲು ಅವುಗಳ ಬಣ್ಣವನ್ನು ಬದಲಾಯಿಸಲಾಗಿದೆ.
ಜನರ ಆಸಕ್ತಿದಾಯಕ ಪ್ರದೇಶಗಳಾದ ರೆಸ್ಟೋರೆಂಟ್ಗಳು, ಮಾಲ್ಗಳು ಇತರ ಪ್ರದೇಶಗಳಿಗೆ ಆರೆಂಜ್ ಎರಿಯಾ’ (ಕಿತ್ತಳೆ ಬಣ್ಣದ ಛಾಯೆ) ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.