ಶ್ರೀನಗರ : ಕಣಿವೆ ರಾಜ್ಯ ಕಾಶ್ಮೀರದಲ್ಲಿ ಮಂಗಳವಾರ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಪಾಕಿಸ್ಥಾನ ಮೂಲದ ಉಗ್ರನೊಬ್ಬ ಜೀವಂತವಾಗಿ ಸೆರೆ ಸಿಕ್ಕಿದ್ದಾನೆ.
ಬಂಧಿತನನ್ನು ಪಾಕಿಸ್ಥಾನದ ಲಾಹೋರ್ ನಿವಾಸಿ ಬಹದ್ದೂರ್ ಅಲಿ ಎಂದು ಗುರುತಿಸಲಾಗಿದೆ.
ಕುಪ್ವಾರ ಜಿಲ್ಲೆಯ ನವ್ಗಾಮ್ ವಲಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಲಷ್ಕರ್ ಉಗ್ರರನ್ನು ಹತ್ಯೆ ಮಾಡಲಾಗಿದೆ. ೨೨ ವರ್ಷದ ಬಹದ್ದೂರ್ ಅಲಿ ಅಲಿಯಾಸ್ ಸೈಫುಲ್ಲಾಹ ತರಬೇತಿ ಪಡೆದ ಲಷ್ಕರ್ ಉಗ್ರನಾಗಿದ್ದಾನೆ.
ಈತನಿಂದ ಭದ್ರತಾ ಪಡೆಗಳು 27 ಸಾವಿರ ಭಾರತೀಯ ಕರೆನ್ಸಿ, ಎಕೆ-47 ರೈಫಲ್ ಮತ್ತು 2 ಪಿಸ್ತೂಲನ್ನು ವಶಪಡಿಸಿಕೊಂಡಿದೆ.
ಒಂದು ತಿಂಗಳಲ್ಲಿ ಸಿಕ್ಕಿಬಿದ್ದ ಎರಡನೇ ಪಾಕಿಸ್ಥಾನಿ ಉಗ್ರ ಈತನಾಗಿದ್ದಾನೆ.
“ಜೀವಂತವಾಗಿ ಉಗ್ರರನ್ನು ಹಿಡಿಯುವುದು ಅತೀ ದೊಡ್ಡ ಸಾಧನೆ. ಇದರಿಂದ ಪಾಕಿಸ್ಥಾನದ ನಿಜಬಣ್ಣ ಬಯಲಾಗಲಿದೆ” ಎಂದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ಕಿರಣ್ ರಿಜ್ಜು ಹೇಳಿದ್ದಾರೆ.
ಕಾಶ್ಮೀರದಲ್ಲಿ ಅಸ್ಥಿರತೆಯನ್ನು ಉಂಟು ಮಾಡುವ ಸಲುವಾಗಿ ಪಾಕಿಸ್ಥಾನ ಭಾರತದೊಳ್ಳಕ್ಕೆ ಉಗ್ರರನ್ನು ನುಸುಳಿಸುತ್ತಿದೆ ಎಂಬ ಭಾರತದ ಆರೋಪ ಇದೀಗ ಸತ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.