ಪಾಕಿಸ್ತಾನಕ್ಕೆ ಇನ್ನು ಬೇರೆ ದಾರಿ ಇರಲಿಲ್ಲ. ಭಾರತೀಯ ಸೈನ್ಯ ಪಾಕಿಸ್ತಾನಕ್ಕೆ ನುಗ್ಗಿ ಅವರನ್ನು ಹೊಡೆದರು ಆಸ್ಚರ್ಯವಿರಲಿಲ್ಲ. ಭಾರತೀಯ ವೀರ ಸೈನಿಕರ ಅದಮ್ಯ ಪೌರುಷಕ್ಕೆ ಪಾಪಿ ಪಾಕಿಸ್ತಾನದ ಆಟ ನಡೆಯಲಿಲ್ಲ. ಬಂದ ದಾರಿಗೆ ಗತಿಯಿಲ್ಲ ಎಂದು ತಿಳಿಯಿತು. ಷರೀಫ್ ಅಮೇರಿಕಾಗೆ ಓಡಿದ; ಸೋತು ಸುಣ್ಣವಾಗಿದ್ದ ಪಾಕಿಸ್ತಾನ ಈಗ ಕ್ಲಿಂಟನ್ ಹೇಳಿದ ಮಾತನ್ನು ಕೇಳಬೇಕಾಗಿತ್ತು. ಅತಿಕ್ರಮಣಕಾರರನ್ನು ಮತ್ತು ಪಾಕ್ ಬೆಂಬಲಿತ ಭಯೋತ್ಪಾದಕರನ್ನು ಭಾರತದ ಗಡಿಯಿಂದ ಹಿಂದಕ್ಕೆ ಕರೆಸಿಕೊಳ್ಳಬೃಕಾಯಿತು. ಕೊನೆಯ ಹಂತದಲ್ಲಿ ಅಸಹಾಯಕವಾಗಿದ್ದರು ಸೋಲೊಪ್ಪದ ಪಾಪಿ ಪಾಕಿಸ್ತಾನ ಭರತಕ್ಕೆ ಸಿಯಾಚಿನ್ ಬಗ್ಗೆ ಮತ್ತೆ ಕಿರಿಕ್ ಎತ್ತಿತು.
ಭಾರತದ ಸೈನಿಕರು ಇದಕ್ಕೆ ತಕ್ಕ ಉತ್ತರವನ್ನು ನೀಡಲು ಸಿದ್ಧವಾಗಿತ್ತು. ಶ್ರೀನಗರ-ಲೇಹ್ ಹೆದ್ದರಿಯಲ್ಲಿ ಕಾಣಿಸುವ ಜುಬರ್ ಹಿಲ್ಸ್ ಕೂಡ ಭಾರತೀಯ ಸೇನೆಯ ಪಾಲಾಯಿತು. ಭಾರತೀಯ ಸೈನ್ಯದ ವಿಜಯ ಯಾತ್ರೆಗೆ ಅಡೆತಡೆಯೇ ಇಲ್ಲದಂತಾಯಿತು. ಇಷ್ಟೊತ್ತಿಗೆ ಭಾರತೀಯ ಸೇನೆಯ ಪಾಲಿಗೆ: ಅಪಾರ ಪ್ರಮಾಣದ ಶಸ್ತ್ರಾಸ್ತ್ತಗಳು, ಬಟ್ಟೆ ಬರೆ, ಆಹಾರ ಸಾಮಾಗ್ರಿಗಳು, ಲಾಂಚರ್ ಸಹಿತ ಸ್ಟ್ರಿಂಗ್ ಕ್ಷಿಪಣಿಗಳು, ಎ.ಎನ್.ಪಿ.ಆರ್.ಸಿ. ರೇಡಿಯೋಗಳು, ಟೆಲಿಫ್ಹೋನ್ ಸೆಟ್ ಗಳು, ಮುಖವಾಡ, ಗನ್, ಹೆವಿ ಮೆಷೀನ್ ಗನ್ ನಮ್ಮದಾಗಿತ್ತು.
ಪಾಕ್ ಗೆ ಜುಲೈ 16 ರಷ್ಟರಲ್ಲಿ ಭಾರತದಿಂದ ಕಾಲ್ತೆಗೆಯಬೇಕು ಎಂದು ಭಾರತ ಎಚ್ಚರಿಕೆ ನೀಡಿತು. ತಪ್ಪಿದರೆ ಮತ್ತೆ ದಾಳಿ ಮಾಡುವುದಾಗಿ ದಿಟ್ಟ ಎಚ್ಚರಿಕೆ ನೀಡಿತ್ತು. ಪಾಕಿಸ್ತಾನ ಈ ಗಡುವನ್ನು ಒಪ್ಪಿಕೊಂಡು ಅತಿಕ್ರಮಣಕಾರಿಗಳ ವಾಪಸಾತಿಗೆ ಮನವೊಲಿಸಲು ಪ್ರಯತ್ನ ಶುರುಮಾಡಿತು. ಪಾಕ್ ಸೋತಿದಕ್ಕೆ ರಾಜಿನಾಮೆ ನೀಡಬೇಕಾಯಿತು. ಪಾಕಿಸ್ತಾನ ಅನ್ಯಗತಿಯಿಲ್ಲದೇ ಭಾರತಕ್ಕೆ ಶರಣಾಗಬೇಕಾಯಿತು. ಜುಲೈ16 ಕ್ಕೆ ಭಾರತದ ಭೂಭಗದಿಂದ ತನ್ನ ಪಡೆಯನ್ನು ಸಂಪೂರ್ಣ ತೆರವು ಗೊಳಿಸಲಾಯಿತು. ಇದರಿಂದಾಗಿ 74 ದಿನಗಳ ಕಾರ್ಗಿಲ್ ಕದನ ಮುಕ್ತಾಯಗೊಂಡಿತು. ಈ ಕದನದಲ್ಲಿ ಸಿಖರು, ಪಂಜಾಬಿಗಳು, ಗೂರ್ಖರು, ಬಿಹಾರಿಗಳು, ನಾಗಾಗಳು, ಬಂಗಾಲಿಗಳು, ಮಲಯಾಳಿಗಳು, ಮರಾಠರು, ಜಾಟರು, ಕನ್ನಡಿಗರು, ತಮಿಳರು….. ಹೀಗೆ ಎಲ್ಲರ ರಕ್ತ ತೊಯ್ದಿವೆ.
ಈ ರಕ್ತದ ಕಲೆಗಳ ಮೇಲೆ ಮತ್ತೆ ಚಳಿಗಾಲದಲ್ಲಿ ಹಿಮಹರಡಿಕೊಳ್ಳಲಿದೆ. ಆದರೆ ಅವರೆಲ್ಲರ ತ್ಯಾಗ ಬಲಿದಾನ ಎಂದಿಗೂ ಅಳಿಯಲಾರವು. ಭಾರತಕ್ಕೆ ಅದೆಂತಹ ಅದಮ್ಯ ಶಕ್ತಿಯಿದೆಯೆಂದು ಚರಿತ್ರೆ ಓದಿದ ಮುಂದಿನ ಪೀಳಿಗೆ ಮೆಚ್ಚಿಕೊಂಡಾದಲಿದೆ. ಭಾರತದ ಆತ್ಮಶಕ್ತಿ ಮತ್ತೆ ಜಾಗೃತವಾಗಲಿದೆ. ಆ ಸಮಯ ಬಂದಾಗ ತಾಯಿ ಭಾರತಿ ಮತ್ತೆ ಮೈಕೊಡವಿ ಎದ್ದು ನಿಲ್ಲಲಿದ್ದಳೆ. ಆಕೆ ಮತ್ತೆ ದುರ್ಗೆಯಾಗಿ ಚಂಡಿಯಾಗಿ ಜಗದ್ಗುರುವಾಗಿ ಇನ್ನಷ್ಟು ಶೋಭಯಮಾನಳಗಿ ತನ್ನ ಸ್ಥಾನವನ್ನು ಅಲಂಕರಿಸಲಿದ್ದಳೆ. ಇದು ಜ್ವಲಂತ ಸಾಕ್ಷಿ.
|| ಭಾರತ್ ಮಾತಾ ಕೀ ಜಯ್ ||
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.