ಮಂಗಳೂರು : ‘ತುಂಬಾ ಧೈರ್ಯಶಾಲಿ ಮತ್ತು ಶಕ್ತಿಶಾಲಿಯಾಗಿದ್ದ ಸಂದೀಪ್ ಉನ್ನಿಕೃಷ್ಣನ್ ಸತ್ತ ಎನ್ನುದಕ್ಕಿಂತ ಇನ್ನಿಲ್ಲ ಎಂದು ತಿಳಿದುಕೊಳ್ಳುವುದು ಒಳಿತು’ ಎಂದು ಸಂದೀಪ್ ಉನ್ನಿಕೃಷ್ಣನ್ ಅವರ ತಂದೆ ಉನ್ನಿಕೃಷ್ಣನ್ ಹೇಳಿದರು.
ನಗರದ ಟಿ.ವಿ. ರಮಣ್ ಪೈ ಸಭಾಂಗಣದಲ್ಲಿ ಯುವ ಬ್ರಿಗೇಡ್ ವತಿಯಿಂದ ಆಯೋಜಿಸಲ್ಪಟ್ಟ ‘ಭಾರತೀಯ ವೀರನೊಬ್ಬನ ಜೀವನಗಾಥೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಸೈನಿಕರಿಗೆ ಅವಕಾಶ ಸಿಕ್ಕರೆ ತಮ್ಮ ಸಾರ್ಮರ್ಥ್ಯ ಏನು ಎಂಬುದನ್ನು ತೋರಿಸಿಕೊಡುತ್ತಾರೆ. ಅದು ಅವರಲ್ಲಿರುವ ಅದ್ಭುತ ಶಕ್ತಿ. ಯುದ್ಧ ಖೈದಿಗಳಾದ ಸಂದರ್ಭ ಯುದ್ಧದ ಗೌಪ್ಯಮಾಹಿತಿ ಹೊರತೆಗೆಯಲು ಸೈನಿಕರಿಗೆ ಚಿತ್ರಹಿಂಸೆ ನೀಡಲಾಗುತ್ತದೆ. ಆದರೂ ನಮ್ಮ ಯೋಧರು ಸಾವನ್ನು ಬಯಸುತ್ತಾರೆ ವಿನಃ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. ಇದು ನಮ್ಮ ಯೋಧರ ಶಕ್ತಿ. ಜಮ್ಮುವಿನ ಸ್ಥಿತಿಯನ್ನು ನೋಡಿದಾಗ ಅದು ಭಾರತದ ಭಾಗವಾಗಿದ್ದರೂ ಪ್ರತ್ಯೇಕವಾದಂತಿದೆ. ಭಯೋತ್ಪಾದಕರ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸವುದು ಅಗತ್ಯ’ ಎಂದರು.
ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಪ್ರೇರಕ ನುಡಿಗಳನ್ನು ಆಡುತ್ತಾ ‘ಉನ್ನಿಕೃಷ್ಣನ್ ದಂಪತಿಗಳನ್ನು ನಾವು ತಂದೆ ತಾಯಿಯ ರೂಪದಲ್ಲಿ ನೋಡುತ್ತಿದ್ದೇವೆ. ಹಿಂದೆ ಸಂದೀಪ್ ಒಬ್ಬನೇ ಮಗನಿದ್ದ. ಈಗ ಭಾರತದಾದ್ಯಂತ ಮಾತ್ರವಲ್ಲ ವಿಶ್ವದಾದ್ಯಂತ ಮಕ್ಕಳಿದ್ದಾರೆ. ಅವರನ್ನು ಎಲ್ಲರೂ ತಂದೆ ತಾಯಿ ರೂಪದಲ್ಲಿ ನೋಡುತ್ತಿದ್ದಾರೆ.
ನನ್ನ ಸ್ನೇಹಿತನಿಗೆ ಕಾಶ್ಮೀರದ ಶೋಷಿಯಾ ಎಂಬ ಭಾಗದಲ್ಲಿ ತೋಟವಿದೆ. ಎರಡು ವರ್ಷದ ಹಿಂದೆ ಅಲ್ಲಿಗೆ ನಾನು ಪ್ರವಾಸ ಹೋಗಿದ್ದಾಗ ಅಲ್ಲಿ ಕೆಲಸ ಮಾಡುತ್ತಿದ್ದ ಆಳನ್ನು ತೋರಿಸಿದ ನನ್ನ ಸ್ನೇಹಿತ ‘ಈತ ಹಿಂದೆ ಭಯೋತ್ಪಾದಕನಾಗಿದ್ದ. ಈಗ ನಿವೃತ್ತನಾಗಿದ್ದಾನೆ’ ಎಂದು ಹೇಳಿದ. ಅವನ ಬಳಿ ಮಾತನಾಡಿದಾಗ `ಪಾಕಿಸ್ಥಾನ ದರಿದ್ರ ರಾಷ್ಟ್ರವಾಗಿದ್ದು ಅದು ಕಾಶ್ಮೀರವನ್ನು ಆಳುವ ಸ್ಥಿತಿಯಲ್ಲಿಲ್ಲ. ಪಾಕ್ಗೆ ಜೈಕಾರ ಹಾಕಿದರೆ ಮಾತ್ರ ಕಾಶ್ಮೀರದ ನಾಯಕರನ್ನು ಇಲ್ಲಿನ ಕೇಂದ್ರ ಸರ್ಕಾರ ಪೋಷಿಸುತ್ತದೆ. ಎಂದು ಹೇಳಿದೆ. ಈ ಹಿಂದೆ ಮನಮೋಹನ್ ಸಿಂಗ್ ಸರ್ಕಾರ ಒಂದು ಸಾವಿರ ಕೋಟಿ ಅನುದಾನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ತನ್ನ ಮನೆಯ ಚಿಂತನೆಯನ್ನು ಬಿಟ್ಟು, ದೇಶ ಚಿಂತನೆಯನ್ನು ಮಾಡುತ್ತಾ ಅದಕ್ಕಾಗಿ ಸಾಯುವಂತಹ ಸೈನಿಕರ ಶಕ್ತಿ ಅದ್ಭುತ. ಭಾರತದ ಸೈನಿಕ ತಾಯಿ ಭಾರತಿಗಾಗಿ ಜೀವ ತೆತ್ತಾಗ ಇಡೀ ದೇಶವೇ ಅವರನ್ನು ಸ್ಮರಿಸುತ್ತದೆ. ಇದುವೇ ಭಾರತ ಸೈನ್ಯದ ಶಕ್ತಿ, ಹಾಗಾಗೀ ಇತರ ರಾಷ್ಟ್ರಗಳು ಭಾರತದೊಂದಿಗೆ ಯುದ್ಧ ಮಾಡಲು ಹಲವು ಬಾರಿ ಯೋಚಿಸುತ್ತವೆ ಎಂದರು.
ಸಂದೀಪ್ ಉನ್ನಿಕೃಷ್ಣನ್ ಅವರ ತಾಯಿ ಮಾತನಾಡುತ್ತಾ ‘ಸಂದೀಪ್ ದೇಶ ಸೇವೆಯ ಕೆಲಸ ಮಾಡುತ್ತಾ , 2008 ರಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆತ ಸಾವನ್ನಪ್ಪಿದ. ನವೆಂಬರ್ 26, 27 ರಂದು ನಾವು ಈಗಲೂ ದಾಳಿಗೀಡಾದ ಮುಂಬಯಿಯ ತಾಜ್ ಹೋಟೆಲ್ನಲ್ಲಿ ಸೇರಿ ಹುತಾತ್ಮ ಯೋಧರನ್ನು ಸ್ಮರಿಸುತ್ತೇವೆ ಎನ್ನುವ ಮೂಲಕ ಮಗನ ಬಗೆಗಿನ ಹಲವು ನೆನಪಗಳನ್ನು ಬಿಚ್ಚಿಟ್ಟರು.
ಭಾರತ ಕಂಡ ಮಹಾನ್ ಯೋಧರಲ್ಲಿ ಸಂದೀಪ್ ಉನ್ನಿಕೃಷ್ಣನ್ ಕೂಡಾ ಒಬ್ಬರು. ಅವರ ಜೀವನಗಾಥೆಯ ಸ್ಮರಣೆ ಇಂದು ಎಲ್ಲರಲ್ಲೂ ದೇಶಭಕ್ತಿಯನ್ನು ಇಮ್ಮಡಿಗೊಳಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.