ಬೆಂಗಳೂರು : ವಾಸವಿ ಕ್ಲಬ್ಸ್ ಇಂಟರ್ನ್ಯಾಷನಲ್ (ಜಿಲ್ಲೆ -ವಿ 301ಎ) ವತಿಯಿಂದ 3ನೇ ಬಾರಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದೆ.
ಕಿಮ್ಸ್ ಹಾಸ್ಪಿಟಲ್, ವಿಎಸ್ಡೆಂಟಲ್ಕೇರ್, ಒಕ್ಕಲಿಗರ ಸಂಘ ಡೆಂಟಲ್ ಕಾಲೇಜು ಮತ್ತು ಅಪೊಲೋ ಆಸ್ಪತ್ರೆಯ ಸಹಯೋಗದಲ್ಲಿ ನಡೆಯಲಿರುವ ಈ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ಇದೇ ಮೊದಲ ಬಾರಿಗೆ ತಜ್ಞ ವೈದ್ಯರು ವಿವಿಧ ರೀತಿಯ ಆರೋಗ್ಯ ತಪಾಸಣೆ ನಡೆಸಲಿದ್ದಾರೆ.
ಹೃದಯ ಸಂಬಂಧಿತ ಕಾಯಿಲೆಗಳ ತಪಾಸಣೆ, ಬಿಪಿ, ಇಸಿಜಿ, ಎಕೋ, ಶುಗರ್ಟೆಸ್ಟ್, ಆರ್ಥೋಪೆಡಿಕ್ಸ್, ನರರೋಗ ತಪಾಸಣೆ, ಥೈರಾಯಿಡ್, ಸ್ತ್ರೀರೋಗ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ; ದಂತ ತಪಾಸಣೆ, ನೇತ್ರ ತಪಾಸಣೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ತಜ್ಞ ವೈದ್ಯರು ಪರಿಶೀಲಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.
ಈ ಬಾರಿಯ ಶಿಬಿರದಲ್ಲಿ ದಂತ ತಪಾಸಣೆಗಾಗಿಯೇ 2 ಕೋಟಿ ರೂ. ಮೌಲ್ಯದ ಸರ್ಜಿಕಲ್ ವಿಶೇಷ ಬಸ್ ಆಗಮಿಸಲಿದೆ. ದಂತ ತಪಾಸಣೆ, ಚಿಕಿತ್ಸೆ ಸೇರಿದಂತೆ ಹಲವು ಆಧುನಿಕ ಚಿಕಿತ್ಸಾ ಸೌಲಭ್ಯಗಳು ಈ ಬಸ್ನಲ್ಲಿರುವುದು ವಿಶೇಷ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಬೃಹತ್ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ, ಇದರ ಲಾಭ ಪಡೆಯಬಹುದು ಎಂದು ರಜತಾ ಡೆವಲಪರ್ಸ್ ಅಧ್ಯಕ್ಷರಾದ ವಿಎನ್. ಕೆಸಿಜಿಎಫ್ ಭೂಪಾಳಂ ಸುನಿಲ್ ಹೇಳಿದ್ದಾರೆ. ಜತೆಗೆ ಕಣ್ಣಿನ ಪೊರೆ ಇದ್ದವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸಾ ಸೌಲಭ್ಯವನ್ನೂ ಕಲ್ಪಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರಿಂದ ಶಿಬಿರ ಉದ್ಘಾಟನೆ
ಭಾನುವಾರ ಜುಲೈ 17 ರಂದು ನಡೆಯುವ ಆರೋಗ್ಯ ಶಿಬಿರವನ್ನು ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರು ಉದ್ಘಾಟಿಸಲಿದ್ದು, ಮಾನ್ಯ ಮಾಜಿ ಗೃಹ ಸಚಿವ ಪಿಜಿಆರ್ ಸಿಂಧ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ರಾಜೀವ್ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯ. ಉಪಕುಲಪತಿ ಶ್ರೀ ಡಾ. ಕೆ.ಎಸ್.ರವೀಂದ್ರನಾಥ್, ರಿಯಲ್ ಟಿವಿ ಉಪಾಧ್ಯಕ್ಷರು ಮತ್ತು ಸಾರ್ಕ್ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಶ್ರೀ ಸಿ. ಜಗನ್ನಾಥ್, ಕೆಸಿಜಿಎಫ್ ಇಂಟರ್ನ್ಯಾಷನಲ್ ಉಪಾಧ್ಯಕ್ಷರಾದ ವಿಎನ್. ಪ್ರೋಗ್ರೆಸ್ಸಿವ್ ಕ್ರೌನ್ಡಾ. ಪಿ.ಎನ್. ಶ್ರೀರಾಮ ಶೆಟ್ಟಿ, ಡಿಸ್ಟ್ರಿಕ್ಟ್ ಗೌರ್ನಲ್ ವಿ೩೦೧ಎ ವಿಎನ್. ಕೆಸಿಜಿಎಫ್ ಗೋಲ್ಡನ್ ಎ.ರಮೇಶ್ ಬಾಬು, ರಜತಾ ಡೆವಲಪರ್ಸ್ ಅಧ್ಯಕ್ಷರಾದ ಶ್ರೀ ವಿಎನ್. ಕೆಸಿಜಿಎಫ್ ಭೂಪಾಳಂ ಸುನಿಲ್ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ದಿನಾಂಕ: 17 ಜುಲೈ, 2016, ಭಾನುವಾರ ಸಮಯ: ಬೆಳಗ್ಗೆ 9 ಗಂಟೆಯಿಂದ. ಸ್ಥಳ: ಆದಿಲಕ್ಷ್ಮಮ್ಮ ಕನ್ವೆನ್ಷನ್ ಹಾಲ್, ವಾಸವಿ ದೇವಸ್ಥಾನದ ಎದುರು, ವಿವಿಪುರಂ, ಬೆಂಗಳೂರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.