ಉಳ್ಳಾಲ: ದುರ್ಬಲ, ಶಿಕ್ಷಣ ವಂಚಿತರ , ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಶಕ್ತಿಯಿಲ್ಲದವರ ಉದ್ಧಾರ ನಡೆಸುತ್ತಿರುವ ರಾಜ್ಯ ಸರಕಾರ ಮೇ.1ರಿಂದ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿಯೇ ಅಕ್ಕಿಯನ್ನು ವಿತರಿಸುವ ಮೂಲಕ ಹಸಿವು ಮುಕ್ತ ರಾಜ್ಯವನ್ನು ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಉಳ್ಳಾಲ ಸಯ್ಯಿದ್ ಮದನಿ ದರ್ಗಾದಲ್ಲಿ ನಡೆಯುತ್ತಿರುವ 423ನೇ ವಾರ್ಷಿಕ ಹಾಗೂ 20ನೇ ಪಂಚವಾರ್ಷಿಕ ಉರೂಸ್ ಪ್ರಯಕ್ತ ಶುಕ್ರವಾರ ನಡೆದ ರಾಜಕೀಯ ಹಾಗೂ ಸಾಮಾಜಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಶಾಂತಿ ಸೌಹಾರ್ದತೆ ಇದ್ದಲ್ಲಿ ಬೆಳವಣಿಗೆ ಸಾಧ್ಯ. ಹಿಂದೆ ನಡೆದ ಪಾದಯಾತ್ರೆ ಮೂಲಕ ಕರಾವಳಿ ಜಿಲ್ಲೆಗಳಲ್ಲಿ ಪಕ್ಷ ಗೆಲುವನ್ನು ಕಂಡಿದೆ. ಈ ಮೂಲಕ ಶಾಂತಿಗಾಗಿ ನಡೆದ ಪಾದಯಾತ್ರೆಯನ್ನು ಒಪ್ಪಿರುವ ಕರಾವಳಿ ಜನ ಶಾಂತಿ ಪ್ರಿಯರು, ಸಾಮರಸ್ಯವನ್ನು ಬಯಸುವವರೆಂದು ಗೊತ್ತಾಗುತ್ತದೆ. ಜಾತ್ಯಾತೀತ ನಿಲುವು ಹೊಂದಿರುವ ಸರಕಾರದ ಮುಖ್ಯಮಂತ್ರಿಗೆ ರಾಜ್ಯದ ಜನರ ಐಕ್ಯತೆ,ಸಾಮರಸ್ಯ ಕಾಪಾಡುವ ಮಹತ್ತರ ಜವಾಬ್ದಾರಿಯಿದೆ. ಇದಕ್ಕೆ ಜಾತ್ಯಾತೀತ ನಿಲುವು ಹೊಂದಿರುವ ಜನಸಾಮಾನ್ಯರು ಪ್ರಯತ್ನಿಸಬೇಕಿದೆ. ಉಳ್ಳಾಲ ದರ್ಗಾಕ್ಕೆ ಇದು ಎರಡನೇ ಭೇಟಿಯಾಗಿದ್ದು, ಹಿಂದಿನ ಭೇಟಿ ವೇಳೆ ಗುರುಗಳ ಆಶೀರ್ವಾದ ಪಡೆದುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿ ಇದೀಗ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಗಳಿಸಿರುವುದು ಧಾರ್ಮಿಕ ಕ್ಷೇತ್ರದ ಶಕ್ತಿಯನ್ನು ತೋರಿಸುತ್ತದೆ. ಒಮದು ಧರ್ಮದ ಆಧಾರದಲ್ಲಿ ಸರಕಾರ ನಡೆಸಲು ಅಸಾಧ್ಯ. ಜಾತ್ಯಾತೀತ ರಾಷ್ಟ್ರದಲ್ಲಿ ಎಲ್ಲಾ ಧರ್ಮದವರ ವಿಚಾರಗಳನ್ನು ತೆಗೆದುಕೊಂಡು ಆಡಳಿತ ನಡೆಸುತ್ತಿದ್ದೇವೆ. ಧರ್ಮದ ಆಶಯ ಮನುಕುಲದ ಉದ್ಧಾರ ಆಗಿರುವುದರಿಂದ ಮತಾಂಧ ಶಕ್ತಿಗಳಿಗೆ ಅವಕಾಶ ನೀಡದಿರಿ. ಈವರೆಗೆ ರೂ.1ರಂತೆ ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ ನೀಡುತ್ತಿದ್ದ ರಾಜ್ಯ ಸರ್ಕಾರ, ಮೇ.1 ರಿಂದ ಪುಕ್ಕಟೆ ಅಕ್ಕಿಯನ್ನು ವಿತರಿಸಲಿದೆ. ಎಪಿಎಲ್ ಕಾರ್ಡುದಾರರಿಗೆ ಹಿಂದಿನಂತೆ ರಿಯಾಯಿತಿ ದರದಲ್ಲಿ ಅಕ್ಕಿಯನ್ನು ವಿತರಿಸುವ ಮೂಲಕ ಹಸಿವು ಮುಕ್ತ ರಾಜ್ಯ ಮತ್ತು ಕೆಳವರ್ಗದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶವನ್ನು ಈಡೇರಿಸಿದಂತಾಗುತ್ತದೆ ಎಂದ ಅವರು ದರ್ಗಾದಲ್ಲಿ ನಿರ್ಮಾಣ ಆಗಬೇಕಿರುವ ಸಮುದಾಯ ಭವನಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ನೀಡಿದರು.
ಯೋಜನಾ ಆಯೋಗ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ದರ್ಗಾದ ಡಾಕ್ಯುಮೆಂಟರಿ ಸಿಡಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ವಕ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಖಮರುಲ್ ಇಸ್ಲಾಂ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮನಾಥ ರೈ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಮಂಗಳೂರು ಉತ್ತರ ಕ್ಷೇತ್ರ ಶಾಸಕ ಬಿ.ಎ. ಮೊಯ್ದಿನ್ ಬಾವಾ, ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಜೆ.ಆರ್.ಲೋಬೊ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೂಡ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಅಸ್ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಕೊಲಾಂಡಿ, ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷ ಕಣಚೂರು ಮೋನು, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಎಂ. ಮಸೂದ್, ರಾಜ್ಯ ವಕ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಕಾರಿ ಎಂ.ಎಸ್.ಜಿಲಾನಿ, ಸೆಬೆಅಬ್ದುಲ್ ರಶೀದ್ ಝೈನಿ, ಮಹಮ್ಮದ್ ಯೂಸುಫ್, ಮಜೀದ್ ಹಾಜಿ ಉಚ್ಚಿಲ, ಸೆಬೆಸ್ಟಿಯನ್, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ, ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ, ಜೆಡಿಎಸ್ ಮುಖಂಡ ಗುಲಾಂ ಮಹಮ್ಮದ್, ಕಾಂಗ್ರೆಸ್ ಮುಖಂಡ ಬಿ.ಎಚ್.ಖಾದರ್, ಎಂ.ಎಸ್.ಮಹಮ್ಮದ್, ಕರ್ನಾಟಕ ರಾಜ್ಯ ವಕ್ ಮಂಡಳಿಯ ಸದಸ್ಯ ಎನ್.ಕೆ.ಎಂ.ಶಾಫಿ ಸಅದಿ, ನಿವೃತ್ತ ಡಿಸಿಪಿ ಜಿ.ಎ.ಬಾವಾ, ಉಳ್ಳಾಲ ನಗರಸಭೆಯ ಅಧ್ಯಕ್ಷೆ ಗಿರಿಜಾ ಎಂ.ಬಾ, ನಗರ ಸಭೆಯ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಕೌನ್ಸಿಲರ್ ಮಹಾಲಕ್ಷ್ಮಿ, ದರ್ಗಾ ಸಮಿತಿ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಯು.ಟಿ.ಇಲ್ಯಾಸ್, ಚಾರಿಟೇಬಲ್ ಟ್ರಸ್ಟ್ನ ಉಪಾಧ್ಯಕ್ಷ ಹನೀಫ್ ಹಾಜಿ, ನಾಝಿಮ್ ಮುಕ್ಕಚ್ಚೇರಿ, ಹಮೀದ್ ಕಲ್ಲಾಪು, ಝಿಯಾದ್ ತಂಙಳ್, ತಂಝಿಲ್, ಫಾರೂಕ್ ಮಾರ್ಗತ್ತಲೆ ಸೇರಿದಂತೆ ದರ್ಗಾ ಸಮಿತಿ ಪದಾಕಾರಿಗಳು ಪ್ರಮುಖರು ಉಪಸ್ಥಿತರಿದ್ದರು.
ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅಶೈಖ್ ಸ್ವಬಹುದ್ದಿನ್ ರಿಫಾಯೀ ಅಲ್ ಬಗ್ದ್ದಾದಿ ದುಆ ಆಶೀರ್ವಚನಗೈದರು.
ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್.ಹಂಝ ಸ್ವಾಗತಿಸಿದರು.
ಸಂಸ್ಥೆಯ ವಿದ್ಯಾರ್ಥಿ ಮಾ. ಶಮಾಸ್ ಸ್ವಾಗತ ಗೀತೆ ಹಾಡಿದರು.
ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಹಳೆಕೋಟೆ ಉರ್ದು ಹಿ.ಪ್ರಾ.ಶಾ. ಮುಖ್ಯ ಶಿಕ್ಷಕಕೆ.ಎಂ.ಕೆ. ಮಂಜನಾಡಿ ಹಾಗೂ ಆರ್.ಕೆ.ಮದನಿ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.