ನವದೆಹಲಿ : ಝಾಕೀರ್ ನಾಯ್ಕ್ ಮಾಲೀಕತ್ವದ ಚಾನೆಲ್ ‘ಪೀಸ್ ಟಿವಿ’ಗೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದ್ದು, ಅಕ್ರಮ ಪ್ರಸಾರ ನಡೆಸುತ್ತಿರುವ ಕೇಬಲ್ ಆಪರೇಟರ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಬಾಂಗ್ಲಾದೇಶದ ಢಾಕಾದಲ್ಲಿ ಉಗ್ರರು ಅಟ್ಟಹಾಸ ಮೆರೆಯಲು ಝಾಕೀರ್ ನಾಯ್ಕ್ ಪ್ರವಚನಗಳೇ ಸ್ಫೂರ್ತಿಯಾಗಿದ್ದವು ಎಂಬ ಹಿನ್ನಲೆಯಲ್ಲಿ ಝಾಕೀರ್ ನಾಯ್ಕ್ ಮಾಲೀಕತ್ವದ ಚಾನೆಲ್ ಪೀಸ್ ಟಿವಿಗೆ ನಿರ್ಬಂಧ ವಿಧಿಸಲಾಗಿದ್ದು, ಈ ಮೂಲಕ ಸಮಾಜದಲ್ಲಿ ದ್ವೇಷ ಬಿತ್ತಿ ಅಶಾಂತಿ ಸೃಷ್ಟಿಸುವ ವಾಹಿನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಕೇಂದ್ರ ರವಾನಿಸಿದೆ.
ಲೈಸೆನ್ಸ್ ಇಲ್ಲದಿದ್ದರೂ ಅನಧಿಕೃತವಾಗಿ ಕೇಬಲ್ ಆಪರೇಟರ್ಗಳ ಮೂಲಕ ಪ್ರಸಾರವಾಗುತ್ತಿರುವ ಪೀಸ್ ಟಿವಿಯನ್ನು ನಿರ್ಬಂಧಿಸಲಾಗಿದೆ. ಯೂಟ್ಯೂಬ್ನಲ್ಲಿ ಇರುವ ವಿಡಿಯೋಗಳನ್ನು ತೆಗೆದು ಹಾಕಲು ಗೂಗಲ್ ಸಂಸ್ಥೆಗೆ ಮನವಿ ಮಾಡಲಾಗಿದೆ. ಒಂದೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಝಾಕೀರ್ ನಾಯ್ಕ್ ವೀಡಿಯೋಗಳಿದ್ದಲ್ಲಿ ಈ ಕುರಿತು ದೂರು ನೀಡುವಂತೆ ಗೃಹ ಇಲಾಖೆಗೆ ಸೂಚಿಸಲಾಗಿದೆ. ಅನಧಿಕೃತವಾಗಿ ಕೇಬಲ್ ಆಪರೇಟರ್ಗಳು ಒಂದೊಮ್ಮೆ ಝಾಕೀರ್ ನಾಯ್ಕ್ ಪ್ರವಚನಗಳನ್ನು ಪ್ರಸಾರ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಈಗಾಗಲೇ ಝಾಕೀರ್ ನಾಯ್ಕ್ ಭಾಷಣಗಳನ್ನೊಳಗೊಂಡಿರುವ ಸಿಡಿಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಅಗತ್ಯವಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸೂಕ್ತ ತನಿಖೆ ನಡೆಸುವಂತೆ ನಿರ್ದೇಶಿಸಲಾಗಿದೆ. ಕೇಂದ್ರ ಸರ್ಕಾರ ಭಯೋತ್ಪಾದನೆಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಆದರೆ ಝಾಕೀರ್ ನಾಯ್ಕ್ ನಾನು ಎಂದೂ ಭಯೋತ್ಪಾದನೆಗೆ ಪ್ರಚೋದನೆ ನೀಡುವಂತಹ ಭಾಷಣಗಳನ್ನು ಮಾಡಿಲ್ಲ. ಈ ಆರೋಪಗಳಲ್ಲಿ ಹುರುಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಭಯೋತ್ಪಾದನೆಗೆ ಪ್ರಚೋದನೆ ನೀಡುವ ವಿಷಯಗಳಿಗೆ ಸಂಬಂಧಿಸಿದಂತೆ 2011 ರಲ್ಲೇ ಪೀಸ್ ಟಿವಿ ವಾಹಿನಿಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿತ್ತು. ಆದರೆ ಕೇಬಲ್ ಆಪರೇಟರ್ಗಳ ಮೂಲಕ ಅನಧಿಕೃತವಾಗಿ ಪ್ರಸಾರ ಮಾಡಲಾಗುತ್ತಿತ್ತು. ವಿಶ್ವದ 200 ದೇಶಗಳಲ್ಲಿ ಈ ಪೀಸ್ ಟಿವಿ ಪ್ರಸಾರವಾಗುತ್ತಿದೆ. ಇಂಗ್ಲೀಷ್, ಉರ್ದು, ಬಾಂಗ್ಲಾ ಭಾಷೆಗಳಲ್ಲೂ ಪ್ರಸಾರವಾಗುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.