×
Home About Us Advertise With s Contact Us

ಪಾಲ್ತಾಡು ವಿಷ್ಣುಮೂರ್ತಿ ದೈವದ ಒತ್ತೆಕೋಲ

ಪಾಲ್ತಾಡಿ: ಪಾಲ್ತಾಡು ವಿಷ್ಣುನಗರದಲ್ಲಿ ವರ್ಷಂಪ್ರತಿ ನಡೆಯುವ ವಿಷೂಮೂರ್ತಿ ದೈವದ ಒತ್ತೆಕೋಲ ಮಾ.24 ಹಾಗೂ 25ರಂದು ನಡೆಯಿತು.

DSCKola-1

ಮಾ.24ರಂದು ಬೆಳಿಗ್ಗೆ ದೈವಸ್ಥಾನದಲ್ಲಿ ಗಣಹೋಮ, ಶುದ್ಧಿ ಕಲಶ, ಮಧ್ಯಾಹ್ನ ಕಲಶ ಪೂಜೆ ನಡೆಯಿತು. ಸಂಜೆ ನಡುಮನೆ ದೈವಸ್ಥಾನದಿಂದ ಭಂಡಾರ ತೆಗೆದು ರಾತ್ರಿ ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸುಮಾರು 5000 ಕ್ಕೂ ಮಿಕ್ಕಿ ಜನರು ಅನ್ನಪ್ರಸಾದ ಸ್ವೀಕರಿಸಿದರು.

DSCKola-2

ಅನ್ನಸಂತರ್ಪಣೆಯ ಬಳಿಕ ಕುಳಿಚಟ್ಟು ನಡೆಯಿತು. ನಂತರ ಯಕ್ಷರಂಗ ಬೆಳ್ಳಾರೆ ಇದರ ಕಲಾವಿದರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಕೋಟಿ-ಚೆನ್ನಯ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

DSCKola-3
ಮಾ.25ರಂದು ಬೆಳಿಗ್ಗೆ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಹರಕೆ, ಪ್ರಸಾದ ವಿತರಣೆ ನಡೆಯಿತು. ಬಳಿಕ ಗುಳಿಗನ ಕಟ್ಟೆಯಲ್ಲಿ ಮುಳ್ಳುಗುಳಿಗನ ಕೋಲ ನಡೆಯಿತು.

Kola4

ಈ ಸಂಧರ್ಭದಲ್ಲಿ ಸಮಿತಿ ಗೌರವಾರ್ಧಯಕ್ಷರಾದ ಪಟೇಲ್ ನಾರಾಯಣ ರೈ ಪಾಲ್ತಾಡು, ಶೀಲಾವತಿ ಎಸ್ ರೈ, ಅಧ್ಯಕ್ಷ ಎನ್.ವಿಶ್ವನಾಥ ರೈ, ಉಪಾರ್ಧಯಕ್ಷ ನವೀನ್ ರೈ ನಡುಮನೆ, ಕಾರ್ಯದರ್ಶಿ ಪದ್ಮನಾಭ ರೈ, ಕೋಶಾಧಿಕಾರಿ ಬಿ.ವಸಂತ ಶೆಟ್ಟಿ ಹಾಗೂ ಸಮಿತಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

 

Recent News

Pungava 01-10-2018
24 hours ago  
Back To Top
error: Content is protected !!