ನಯಾಘರ್: ಆಕೆ 35 ವರ್ಷದ ಬುಡಕಟ್ಟು ಮಹಿಳೆ, ಪಶ್ಚಿಮ ಒರಿಸ್ಸಾದ ಗುಂಡುರಿಬಡಿ ಗ್ರಾಮದವಳು, ತನ್ನ ಇತರ ಸಂಗಡಿಗರೊಂದಿಗೆ ಸೇರಿ ಅರಣ್ಯವನ್ನು ರಕ್ಷಿಸುವುದು ಆಕೆಯ ನಿತ್ಯ ಕಾಯಕ.
ಕಾಮ ಪ್ರಧಾನ್, ಅರಣ್ಯ ರಕ್ಷಣೆಗಾಗಿ ಜನಿಸಿದವಳು, ಅರಣ್ಯ ಸಂರಕ್ಷಣೆಗಾಗಿ ಬದುಕುತ್ತಿರುವವಳು. ತನ್ನವರೊಂದಿಗೆ ಸೇರಿ 200 ಎಕರೆ ಅರಣ್ಯವನ್ನು ಕಾವಲು ಕಾಯುವುದು ಈಕೆಯ ಕೆಲಸ. ’ನಮ್ಮ ತಾಯಿ ಅರಣ್ಯ, ಅದರ ಒಂದು ಮೀಟರ್ ದೂರದವರೆಗೂ ಯಾರೂ ನಮ್ಮನ್ನು ವಂಚಿಸಲು ಸಾಧ್ಯವಿಲ್ಲ. ಆಕೆ ನಮಗೆ ಬದುಕು ಕೊಟ್ಟಿದ್ದಾಳೆ, ಅವಳಿಗೆ ನಾವು ನಮ್ಮ ಬದುಕನ್ನು ಮುಡಿಪಾಗಿಟ್ಟಿದ್ದೇವೆ’ ಎಂದು ಆಕೆ ಹೇಳುತ್ತಾಳೆ.
ಗುಂಡುರಿಬಡಿ ಗ್ರಾಮದಲ್ಲಿ 27 ಮನೆಗಳು ಇದ್ದು, ಇದರ ಎಲ್ಲಾ ಸದಸ್ಯರು ತಮ್ಮ ಅರಣ್ಯಗಳ ಸಂರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದಾರ. ಈ ಅರಣ್ಯ ಸರ್ಕಾರಕ್ಕೆ ಸೇರಿದರೂ, ಅದರೊಳಗೆ ಒಬ್ಬರೇ ಒಬ್ಬರು ಕಳ್ಳಕಾಕರನ್ನು ಬರದಂತೆ, ಮರಗಳ ಕಳವು ಆಗದಂತೆ ಇವರು ನೋಡಿಕೊಳ್ಳುತ್ತಿದ್ದಾರೆ.
ಬುಡಕಟ್ಟು ಜನರಿಗೆ ಅರಣ್ಯಗಳಲ್ಲಿ ಬದುಕುವ, ಟಿಂಬರ್ ವಸ್ತುಗಳನ್ನು ಮಾರಾಟ ಮಾಡುವ ಅಧಿಕಾರವನ್ನು ಸರ್ಕಾರ ಬುಡಕಟ್ಟು ಜನರಿಗೆ ನೀಡಲಾಗಿದೆ. ಭೂಮಿ ಇಲ್ಲದ ಎಷ್ಟೋ ಕುಟುಂಬಗಳು ಅರಣ್ಯವನ್ನು ಆಶ್ರಯಿಸಿ ಬದುಕುತ್ತಿವೆ. ಅಂತಹ ಆಶ್ರಯ ನೀಡಿದ ಅರಣ್ಯವನ್ನು ಕಾಮ ಪ್ರಧಾನ್ರಂತಹ ಮಹಿಳೆಯರು ಅತ್ಯಂತ ಜವಾಬ್ದಾರಿಯುತವಾಗಿ ಸಂರಕ್ಷಣೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನಾರ್ಹ ಕಾರ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.