ಮಂಗಳೂರು: ಸತತವಾಗಿ ಯೋಗ ಅಭ್ಯಾಸ ಮಾಡುತ್ತಿರುವ ನಗರದ ವಿಕಾಸ್ ಕಾಲೇಜಿನಲ್ಲಿ ದಿನಾಂಕ 21-06-2016 ರಂದು ಯೋಗ ದಿನವನ್ನು ಆಚರಿಸಲಾಯಿತು.
ಅಂತರಾಷ್ಟ್ರೀಯ ಯೋಗ ತೀರ್ಪುಗಾರರಾದ ಯೋಗರತ್ನ ಶ್ರೀಯುತ ಗೋಪಾಲಕೃಷ್ಣ ದೇಲಂಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಯೋಗ ಮನಸ್ಸನ್ನು ಅರಳಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಸತತ ಸರಳ ಯೋಗಾಭ್ಯಾಸದಿಂದ ತಮ್ಮನ್ನು ವಿಕಸನಗೊಳಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ಯೋಗವನ್ನು ಅಭ್ಯಸಿಸಿದರು.
ಅಧ್ಯಕ್ಷ ಸ್ಥಾನವನ್ನು ಮಾಜಿ ಸಚಿವರೂ, ಹಾಗೂ ಕಾಲೇಜಿನ ಸ್ಥಾಪಕ ಅಧ್ಯಕ್ಷರೂ ಆಗಿರುವ ಶ್ರೀಯುತ ಜೆ.ಕೃಷ್ಣ ಪಾಲೆಮಾರ್ ವಹಿಸಿ ಯುವ ಪ್ರತಿಭೆಗಳು ಯೋಗದ ಸದುಪಯೋಗ ಪಡೆದುಕೊಳ್ಳಬೇಕು. ಯೋಗದ ಅಗತ್ಯ ಎಲ್ಲರಿಗೂ ಇದೆ. ಅದರಲ್ಲೂ ಯುವಪ್ರತಿಭೆಗಳಿಗೆ ಯೋಗ ಹೆಮ್ಮೆ ತರುವ ವಿಷಯ ಎಂದರು.
ವಿಕಾಸ್ ಎಜ್ಯುಕೇಷನ್ ಟ್ರಸ್ಟ್ನ ಟ್ರಸ್ಟಿಗಳಾದ ಶ್ರೀಯುತ ಸೂರಜ್ ಕಲ್ಯ, ಸಲಹೆಗಾರರಾದ ಡಾ|ಅನಂತ್ಪ್ರಭು ಜಿ. ಪ್ರಾಂಶುಪಾಲರಾದ ಪ್ರೊಫೆಸರ್ ವೆಂಕಟ ರಾಯುಡು, ಉಪಪ್ರಾಂಶುಪಾಲೆ ಶ್ರೀಮತಿ ಮೋಹನಾ ಪ್ರೊಫೆಸರ್ ಗೋಪಾಲ್ ರೆಡ್ಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನಿರ್ದೇಶಕರಾದ ಶ್ರೀಮತಿ ವಿದ್ಯಾ ಕಾಮತ್, ಯೋಗ ನಿರ್ದೇಶಕರಾದ ಶ್ರೀಮತಿ ಆಶಾಕುಮಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜಕರಾದ ಶ್ರೀಯುತ ಪ್ರದೀಪ್.ಎ, ಉಪಸ್ಥಿತರಿದ್ದರು. ಉಪನ್ಯಾಸಕರಾದ ಶ್ರೀಯುತ ಲಕ್ಷ್ಮೀಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.