ಕೊಲಂಬೋ: ಶ್ರೀಲಂಕಾದ ಜಾಫ್ನಾದಲ್ಲಿ ಭಾರತದ ಸಹಭಾಗಿತ್ವದೊಂದಿಗೆ ಪುನರ್ ನಿರ್ಮಾಣಗೊಂಡಿರುವ ಕ್ರೀಡಾಂಗಣವೊಂದನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿಯಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆಗೊಳಿಸಿದ್ದಾರೆ.
ಜಾಫ್ನಾದ ಮಾಜಿ ಮೇಯರ್ ಅಲ್ಫ್ರರ್ಡ್ ತಂಬಿರಾಜ ದೊರೈಯಪ್ಪ ಅವರ ಸ್ಮರಣಾರ್ಥ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿದ್ದು, ದೊರೈಯಪ್ಪ ಸ್ಟೇಡಿಯಂ ಎಂದು ಜನಜನಿತವಾಗಲಿದೆ, ಇದರ ನಿರ್ಮಾಣಕ್ಕೆ ತಗುಲಿದ ವೆಚ್ಚ 7 ಕೋಟಿ ರೂಪಾಯಿಗಳು.
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮತ್ತು ಮೋದಿ ಜಂಟಿಯಾಗಿ ಸ್ಟೇಡಿಯಂ ಉದ್ಘಾಟಿಸಿದ್ದಾರೆ. ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದಾರೆ.
ಈ ಸಂದರ್ಭ ಸುಷ್ಮಾ ಸ್ಮರಾಜ್, ವಿಕಾಸ್ ಸ್ವರೂಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಯೋಗದಿನವಾದ ಜೂನ್ 21ರಂದು ಸುಮಾರು 8000 ಮಂದಿ ಈ ಸ್ಟೇಡಿಯಂನಲ್ಲಿ ಭಾಗವಹಿಸಿ ಯೋಗ ಮಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.