ನವದೆಹಲಿ: ಆರ್ವಿಎಸ್ ಸ್ಕೂಲ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳು ಹೈಡ್ರೋಜನ್ ಸಹಾಯದಿದಂದ ಚಲಿಸುವ ಬೈಕ್ನ್ನು ಅನಾವರಣಗೊಳಿಸಿದ್ದಾರೆ.
ಕಾಲೇಜಿನ ಅಟೊಮೊಬೈಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಆರ್. ಬಾಲಾಜಿ, ಗೌತಮ್ ರಾಜ್, ಜೆರ್ರಿ ಜಾರ್ಜ್ ಮತ್ತು ಖಾಲಿದ್ ಇಬ್ರಾಹಿಂ ಪರಿಸರ ಸ್ನೇಹಿ ಹಾಗೂ ಪೆಟ್ರೋಲ್ಗೆ ಪರ್ಯಾಯ ಇಂಧನ ಬೈಕ್ನ್ನು ನಿರ್ಮಿಸಿದ್ದಾರೆ. ಈ 4 ಸ್ಟ್ರೋಕ್ ಬೈಕ್ 1 ಲೀಟರ್ ಹೈಡ್ರೋಜನ್ ಸಹಾಯದಿಂದ 148 ಕಿ.ಮೀ. ದೂರವನ್ನು ಕ್ರಮಿಸುತ್ತದೆ.
ಇಂದು ವಾಹನಗಳನ್ನು ಚಲಾಯಿಸಲು ಜಗತ್ತು ಪರಿಸರ ಸ್ನೇಹಿ, ಪರ್ಯಾಯ ಇಂಧನವನ್ನು ಬಯಸುತ್ತಿದೆ. ಆದ್ದರಿಂದ ಹೈಡ್ರೋಜನ್ನಿಂದ ಚಲಿಸುವ ಬೈಕ್ನ್ನು ನಿರ್ಮಿಸಲಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ಅವರ ಸಹಾಯಕ ಪ್ರೋಫೆಸರ್ ಪಿ. ಲಕ್ಷ್ಮಣನ್ ಮಾರ್ಗದರ್ಶನ ನೀಡಿದ್ದಾರೆ.
ಪ್ರತಿ ಲೀಟರ್ಗೆ ಕೇವಲ ರೂ.30 ಆಗಿದ್ದು, ಅತಿ ಕಡಿಮೆ ಬೆಲೆಯಲ್ಲಿ ಹೈಡ್ರೋಜನ್ ದೊರೆಯುತ್ತಿದೆ. ಆನರು ಇದರ ಸದುಪಯೋಗ ಪಡೆಯಬೇಕು. ಪ್ರತಿ 1000 ಕಿ.ಮೀ.ಗೆ ಒಂದು ಬಾರಿ ಶುದ್ಧೀಕರಿಸಿದ ನೀರು (ಡಿಸ್ಟಿಲ್ಡ್ ವಾಟರ್) ಹಾಕಬೇಕು. ಒಂದು ಬೈಕ್ನ್ನು ಹೈಡ್ರೋಜನ್ ಚಾಲಿತ ವಾಹನವಾಗಿ ಪರಿವರ್ತಿಸಲು ಕೇವಲ ರೂ.7000 ತಗಲುವುದು ಎಂದು ಬಾಲಾಜಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.