ನವದೆಹಲಿ: ವನ್ಯಜೀವಿ ಪ್ರೇಮಿಗಳಿಗೆ ಇದೊಂದು ಸದಾವಕಾಶ. ಧ್ಯಪ್ರದೇಶದ ವನ್ಯಜೀವಿಗಳನ್ನು ಅನುಭವಿಸಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಿರುವ ಐಆರ್ಸಿಟಿಸಿ ಜೂ.5ರ ಪರಿಸರ ದಿನದಂದು ’ಟೈಗರ್ ಎಕ್ಸ್ಪ್ರೆಸ್’ ರೈಲನ್ನು ಅನಾವರಣಗೊಳಿಸಿದೆ.
ಈ ಋತುವಿನ ಮೊದಲ ’ಟೈಗರ್ ಟ್ರಯಲ್’ ಪರೀಕ್ಷಾರ್ಥ ಓಡಾಟವನ್ನು ಜೂ.10ರಂದು ನಡೆಸಲಾಯಿತು. ಕಾನ್ಹಾ ಮತ್ತು ಬಾಂಧವಗಢ ಕಾಡುಗಳಲ್ಲಿ ಹುಲಿಗಳು ಮತ್ತಿತರ ಪ್ರಾಣಿ-ಪಕ್ಷಿಗಳನ್ನು ಕಂಡು ಪ್ರಯಾಣಿಕರು ಆನಂದಿಸಿದರು.
ಈ ರೈಲು ಸೇವೆ ಮುಂದಿನ ಅಕ್ಟೋಬರ್ನಲ್ಲಿ ಆರಂಭವಾಗಲಿದ್ದು, 5 ಹಗಲು ಮತ್ತು 6 ರಾತ್ರಿಗಳ ಪ್ಯಾಕೇಜ್ ಹೊಂದಲಿದೆ. ಸದ್ಯ ಇದರ ಎಸಿ-ಫಸ್ಟ್ ಕ್ಲಾಸ್ ಟಿಕೆಟ್ ದರ 39,500ರಿಂದ 49,500 ಇದೆ. ಎಸಿ- 2 ಟೈಯರ್ ಟಿಕೆಟ್ ದರ 33,500ರಿಂದ 43,500 ಹೊಂದಿದೆ. ಇದರ ಟಿಕೆಟ್ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಐಆರ್ಸಿಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.