ನವದೆಹಲಿ: ಎಎಪಿ ಸಮಾವೇಶದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿ ನೀಡುವಂತೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
ಅಲ್ಲದೇ ಘಟನೆಯ ಬಗ್ಗೆ ತನಿಖೆ ನಡೆಸುವ ಸೂಚನೆಯನ್ನೂ ನೀಡಿದ್ದಾರೆ.
ಇನ್ನೊಂದೆಡೆ ಎಎಪಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು ‘ರೈತ ಆತ್ಮಹತ್ಯೆ ಮಾಡಿಕೊಳ್ಳುವಾಗ ಅದನ್ನು ತಡೆಯಲು ಎಎಪಿ ಕಾರ್ಯಕರ್ತರು ಯಾಕೆ ಮುಂದಾಗಲಿಲ್ಲ, ಆತ್ಮಹತ್ಯೆಯ ಬಳಿಕವೂ ಎಎಪಿ ಸಮಾವೇಶವನ್ನು ಮುಂದುವರೆಸಿದ್ದು ಯಾಕೆ, ಇದೊಂದು ಯೋಜಿತ ಕೊಲೆ’ ಎಂದು ಆರೋಪಿಸಿದೆ.
ಎಎಪಿಯ ಅಸೂಕ್ಷ್ಮತೆ ಮತ್ತು ಆಯೋಜಕರ ವೈಫಲ್ಯದಿಂದಾಗಿ ಆತ್ಮಹತ್ಯೆ ನಡೆದುಹೋಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಆದರೆ ಎಎಪಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದು, ಪೊಲೀಸರ ಮತ್ತು ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದೆ.
‘ಮಾಧ್ಯಮಗಳು ಯಾಕೆ ತಮ್ಮ ಕ್ಯಾಮೆರಾವನ್ನು ರೈತ ಆತ್ಮಹತ್ಯೆ ಮಾಡುವ ಕಡೆ ತಿರುಗಿಸಿರಲಿಲ್ಲ ಮತ್ತು ಆತನನ್ನು ಕಾಪಾಡಲಿಲ್ಲ. ರೈತನನ್ನು ಆಸ್ಪತ್ರೆಗೆ ಸಾಗಿಸಿದ್ದು ನಮ್ಮ ಕಾರ್ಯಕರ್ತರೇ ಹೊರತು ಪೊಲೀಸರಲ್ಲ. ನಮ್ಮ ಕಾರ್ಯಕರ್ತರು ಮರ ಹತ್ತುವ ತರಬೇತಿಯನ್ನು ಪಡೆದಿಲ್ಲ’ ಎಂದು ಎಎಪಿ ನಾಯಕ ಅಶುತೋಷ್ ಹೇಳಿದ್ದಾರೆ.
ಅಲ್ಲದೇ ಸಮಾವೇಶವನ್ನು ಅರ್ಧಕ್ಕೆ ನಿಲ್ಲಿಸಿದ್ದರೆ ಕಾಲ್ತುಳಿತ ಸಂಭವಿಸುತ್ತಿತ್ತು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.