ಬಂಟ್ವಾಳ : ಪುದು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ಪುದು ಕೊಡಮಣ್ಣು ಮತ್ತು ಮೇರಮಜಲಿನ ಮೆಸ್ಕಾಂ ಇಲಾಖೆಗೆ ಸಂಬಂದ ಪಟ್ಟ ಸಮಸ್ಯೆ ಮತ್ತು ಅಹವಾಲುಗಳಿಗೆ ಪುದು ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿಯವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ಮೆಸ್ಕಾಂ ಕಾರ್ಯ ನಿರ್ವಾಹಕ ಇಂಜೀನಿಯರ್ ನಾರಾಯಣ ಭಟ್ ಸಮ್ಮುಖದಲ್ಲಿ 3 ಗ್ರಾಮಗಳ ಜನಪ್ರತಿನಿಧಿ ಮತ್ತು ಗ್ರಾಮಸ್ಥರನ್ನು ಸೇರಿಸಿ ಸಭೆ ಕರೆಯಲಾಯಿತು.
ಪದೇ ಪದೇ ಕೈಕೊಡುತಿರುವ ಕರೆಂಟು , ಲೈನು ಗಳಲ್ಲಿರುವ ಅವ್ಯವಸ್ತೆ ಗಳ ಬಗ್ಗೆ ಚರ್ಚಿಸಲಾಯಿತು , ಮುಂಬರುವ ರಂಜಾನ್ , ಕೃಷ್ಣ ಜನ್ಮಾಷ್ಟಮಿ , ಗಣೇಶ ಚತುರ್ಥಿ ಹಬ್ಬಗಳ ಸಂದರ್ಭಗಳಲ್ಲಿ ಅವ್ಯವಸ್ತೆ ಗಳನ್ನ ಸರಿಪಡಿಸಿ ಗುಣ ಮಟ್ಟದ ವಿದ್ಯುತ್ ಕೊಡುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಫರಂಗಿಪೇಟೆ ಕಿರಿಯ ಇಂಜೀನಿಯರ್ ರಾಜಶೇಕರ್ , ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸತೀಶ್ ನಾಯ್ಕ , ಸುಬ್ರಮಣ್ಯ ರಾವ್ , ಜಯಶ್ರೀ , ಪ್ರವೀಣ್ ಶೆಟ್ಟಿ , ಮನೋಜ್ ಆಚಾರ್ಯ, ದಿನೇಶ್ ಆರ್ ಶೆಟ್ಟಿ , ಎ ಕೆ ಗಿರೀಶ್ ಶೆಟ್ಟಿ, ಪದ್ಮನಾಭ ಶೆಟ್ಟಿ, ಟಿ ಕೆ ಬಷೀರ್, ಸುಲೈಮಾನ್, ಬಶೀರ್ ಅಮೆಮಾರ್, ಹನೀಫ್, ಆಶ್ರಫ್ ಮತ್ತಿತರರು ಉಪಸ್ಥಿತರರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.