ಬುದ್ಧಿವಂತರ ಅತೀ ದೊಡ್ಡ ಲಕ್ಷಣವೆಂದರೆ ಅವರು ಚಿಕ್ಕ ವಯಸ್ಸಲ್ಲೇ ತಮ್ಮ ಕುಶಲಾಗ್ರತೆಯನ್ನು ಜಗತ್ತಿನ ಮುಂದೆ ತೆರೆದಿಡುತ್ತಾರೆ. ಅದು 16 ವರ್ಷದ ಶ್ರವಣ್ ಮತ್ತು 14ರ ಹರೆಯದ ಸಂಜಯ್ ಕುಮಾರನ್ ವಿಷಯದಲ್ಲೂ ನಿಜವಾಗಿದೆ. ಯೌವ್ವನಕ್ಕೆ ಇನ್ನೂ ಇವರು ಕಾಲಿಟ್ಟಿಲ್ಲ ಆದರೂ ಉದಯೋನ್ಮುಖ ಉದ್ಯಮಿಗಳಾಗಿ ಹೆಸರು ಮಾಡಿದ್ದಾರೆ.
ಚೆನ್ನೈ ಮೂಲದವರಾದ ಈ ಇಬ್ಬರು ಸಹೋದರರು ಗೋ-ಡೈಮೆನ್ಶನ್ಸ್ ಎಂಬ ಸಾಫ್ಟ್ವೇರ್ ಸಂಸ್ಥೆಯನ್ನು ನಾಲ್ಕು ವರ್ಷಗಳ ಹಿಂದೆ ಅಂದರೆ ತಮ್ಮ 12 ಮತ್ತು 10ನೇ ವಯಸ್ಸಿನಲ್ಲಿ 2012ರಲ್ಲಿ ಸ್ಥಾಪನೆ ಮಾಡಿದ್ದಾರೆ. ಈ ಮೂಲಕ ಭಾರತದ ಅತೀ ಕಿರಿಯ ಸಿಇಓಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ತಮ್ಮ ಮೊದಲ ಮೊಬೈಲ್ ಅಪ್ಲಿಕೇಶನ್ಗೆ ಚಾಲನೆ ನೀಡುವಾಗ ಇವರು 6 ಮತ್ತು 8ನೇ ತರಗತಿಯಲ್ಲಿದ್ದರು, ಕಳೆದ 4 ವರ್ಷದಲ್ಲಿ ಇವರು ಒಟ್ಟು 11 ಮೊಬೈಲ್ ಅಪ್ಲೀಶನನ್ನು ಅಭಿವೃದ್ಧಿಪಡಿಸಿದ್ದಾರೆ. ಇದು 70 ಸಾವಿರ ಡೌನ್ಲೋಡ್ ಕಂಡಿದೆ.
ಈ ಅಮೋಘ ಸಾಧನೆ ಮಾಡಿರುವ ಚೆನ್ನೈನ ಈ ಸಹೋದರರಿಗೆ ಸ್ಟೀವ್ ಜಾಬ್ಸ್ ಅವರೇ ಪ್ರೇರಣೆ. ಭಾರತದ ಅತೀ ಕಿರಿಯ ಮೊಬೈಲ್ ಅಪ್ಲಿಕೇಶನ್ ಪ್ರೊಗ್ರಾಂರ್ ಗಳಾಗಿ ಇವರು ಆಪಲ್ ಕಂಪನಿಯ ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ.
ಇವರ ಅಪ್ಲಿಕೇಶನ್ ಅಲ್ಫಾಬೆಟ್ ಬೋರ್ಡ್ ಆಪ್ ಸ್ಟೋರ್ನಲ್ಲಿ 5 ಸ್ಟಾರ್ ರೇಟಿಂಗ್ ಹೊಂದಿದೆ. ಇದೀಗ ಇವರ ಗುರಿ ಏನೆಂದರೆ ಭಾರತದ ಶೇ. 50 ರಷ್ಟು ಮೊಬೈಲ್ ಬಳಕೆದಾರರು ತಮ್ಮ ಅಪ್ಲಿಕೇಶನ್ ಬಳಸಬೇಕೆಂಬುದು. ಅವರ ಈ ಕನಸು ನನಸಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.