ಬೆಂಗಳೂರು : ಸುರಮಣಿ, ನಾದನಿಧಿ ಹೀಗೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವಖ್ಯಾತ ಕೊಳಲು ವಾದಕ ಪ್ರವೀಣ್ಗೋಡ್ಖಿಂಡಿಅವರಿಗೆ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ ಒಲಿದಿದೆ. ಅಂತಾರಾಷ್ಟ್ರೀಯ ಮಟ್ಟದ`ಝಡ್ಎಂಆರ್ ಮ್ಯೂಜಿಕ್ಅವಾರ್ಡ್’ನ (ಝಡ್ಎಂಆರ್ ಸಂಗೀತ ಪ್ರಶಸ್ತಿ) ಗರಿ ಗೋಡ್ಖಿಂಡಿ ಅವರ ಮುಡಿಗೇರಿದೆ.
`ಝೋನ್ ಮ್ಯೂಸಿಕ್ ರಿಪೋರ್ಟರ್’ ಅಮೆರಿಕಾದಪ್ರತಿಷ್ಠಿತ ಸಂಗೀತ ಸಂಸ್ಥೆ ಪ್ರತಿವರ್ಷ ವಿಶ್ವದಖ್ಯಾತ ಸಂಗೀತ ವಿದ್ವಾಂಸರಿಗೆ ಹಲವು ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡುತ್ತಿದೆ.
`ಬೆಸ್ಟ್ಕಾನ್ಟೆಂಪ್ರರಿಇನ್ಸ್ಟ್ರುಮೆಂಟಲ್ಆಲ್ಬಂ’ (ಅತ್ಯುತ್ತಮ ಸಮಕಾಲೀನ ವಾದ್ಯ ಸಂಗೀತಆಲ್ಬಂ)ವಿಭಾಗದಲ್ಲಿ ಪ್ರವೀಣ್ಗೋಡ್ಖಿಂಡಿಅವರ `ಇಮ್ಯಾಜಿನಿಂಗ್ಸ್’ ಎಂಬ ವಾದ್ಯ ಸಂಗೀತದ ಆಲ್ಬಂಗೆ 2015ನೇ ಸಾಲಿನ `ಝಡ್ಎಂಆರ್ ಸಂಗೀತ ಪ್ರಶಸ್ತಿ’ ನೀಡಿ ಗೌರವಿಸಿದೆ.
ಈ ಆಲ್ಬಂನಲ್ಲಿ ಗೋಡ್ಖಿಂಡಿ ಅವರ ಜತೆ ವಿದೇಶಿ ಖ್ಯಾತ ಸಂಗೀತಗಾರರಾದ ಪೌಲ್ ಆಡಮ್ಸ್, ಡೇವಿಡ್ ಹಾಫ್ಮ್ಯಾನ್ ಮತ್ತು ಎಲಿಜಬೆತ್ ಗೇರ್ ಅವರ ಸಂಗೀತ ಸಹಯೋಗವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.