×
Home About Us Advertise With s Contact Us

ಗುಲಾಮಗಿರಿ ನಿರ್ಮೂಲನೆಗೆ ಕಟಿಬದ್ಧರಾಗಬೇಕಿದೆ…

slaveryಪ್ರತಿ ವರ್ಷ ಮಾರ್ಚ್ 25ರಂದು ಗುಲಾಮಗಿರಿ ದಿನವನ್ನಾಗಿ ಆಚರಿಸಲಾಗುತ್ತಿದೆ. 400 ವರ್ಷಗಳ ಕಾಲ, 15 ಮಿಲಿಯನ್‌ಗೂ ಹೆಚ್ಚು ಪುರುಷರು, ಮಹಿಳೆಯರು ಹಾಗೂ ಮಕ್ಕಳು ಅಟ್ಲಾಂಟಿಕ್ ಗುಲಾಮಗಿರಿಯಲ್ಲಿ ಸಾಗಿದ್ದು ಇತಿಹಾಸದಲ್ಲೇ ಅತ್ಯಂತ ಕರಾಳ ದುರಂತ.

ಗುಲಾಮಗಿರಿ ವ್ಯವಸ್ಥೆಯ ಕೈಯಲ್ಲಿ ಮಡಿದವರನ್ನು ನೆನಪಿಸುವ ಹಾಗೂ ಗೌರವಿಸುವ ಅವಕಾಶವನ್ನು ಮಾ.25 ಮಾಡಿಕೊಡುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೂರ್ವಾಗ್ರಹ ಪೀಡಿತ ವ್ಯವಸ್ಥೆಯ ಮತ್ತು ಇಂದಿನ ಅಪಾಯಗಳ ಬಗ್ಗೆ ಅರಿವು ಮೂಡಿಸುವುದು ಈ ಗುಲಾಮ ಗಿರಿ ದಿನದ ಉದ್ದೇಶವಾಗಿದೆ.

ಗುಲಾಮಗಿರಿ ಸಂತ್ರಸ್ತರಿಗೆ ಗೌರವ ಸೂಚಿಸುವ ಸಲುವಾಗಿ ಒಂದು ಸ್ಮಾರಕ ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಿರ್ಮಿಸಲಾಗಿದೆ.

ಅಟ್ಲಾಂಟಿಕ್‌ನ ಗುಲಾಮಗಿರಿ ಮತ್ತು ಬಲವಂತದ ವಲಸೆಯು ಇತಿಹಾಸದಲ್ಲಿ ಒಂದು ಅತ್ಯಂತ ದೊಡ್ಡ ಅಮಾನವೀಯತೆಯಾಗಿದೆ. ಆಫ್ರಿಕನ್ನರ ವ್ಯಾಪಕ ವಲಸೆ ವಿಶ್ವದ ಅನೇಕ ಪ್ರದೇಶಗಳಲ್ಲಿ ಹರಡಿತು ಮತ್ತು ಇದು 400 ವರ್ಷದ ಅವಧಿಯಲ್ಲಿ ಮಾನವ ಇತಿಹಾಸದ ದಾಖಲೆಯಾಗಿತ್ತು. ಇದರ ಪರಿಣಾಮ ಶೇ.96ರಷ್ಟು ಬಂಧಿತ ಆಫ್ರಿಕನ್ನರನ್ನು ದ್ವೀಪಗಳ ಮೂಲಕ ಇಕ್ಕಟ್ಟಾದ ಗುಲಾಮಿ ಹಡಗುಗಳಲ್ಲಿ ದಕ್ಷಿಣ ಅಮೇರಿಕ ಹಾಗೂ ಕೆರಿಬ್ಬಿಯನ್ ಬಂದರುಗಳಿಗೆ ಸಾಗಿಸಲಾಗುತ್ತಿತ್ತು.

ಆಫ್ರಿಕಾದ 15 ಮಿಲಯನ್ ಜನಸಂಖ್ಯೆಯಲ್ಲಿ 3ರಲ್ಲಿ ಒಂದು ಭಾಗದಷ್ಟು ಮಹಿಳೆಯರೇ ಗುಲಾಮರಾಗಿದ್ದರು. ಇವರು ತಮ್ಮ ಕಠಿಣ ಪರಿಸ್ಥಿತಿಯ ಜೊತೆಗೆ ಬಲವಂತದ ಕಾರ್ಮಿಕತನದ ದಬ್ಬಾಳಿಕೆ, ಮೈಬಣ್ಣ ಹಾಗೂ ಲಿಂಗ ಭೇದದ ತಾರತಮ್ಯ ಮತ್ತು ತೀವ್ರ ಶೋಷಣೆಯನ್ನು ಅನುಭವಿಸಿದರು. ಮಹಿಳೆಯರು ವಿವಿಧ ರೀತಿಯಲ್ಲಿ ಗುಲಾಮಗಿರಿಯನ್ನು ವಿರೋಧಿಸಿದರು. ಅವರು ತಮ್ಮ ಸಮುದಾಯಗಳ ಘನತೆ ಮತ್ತು ಏಕತೆ ಕಾಪಾಡಲು ಪ್ರಯತ್ನಿಸಿದರು. ಕೆಲವರು ತಮ್ಮ ಧನಿಗಳ ಉಪಪತ್ನಿಯರಾಗಿ ಹಾಗೂ ಇನ್ನು ಕೆಲವರು ತಮ್ಮ ಹಾಗೂ ಅವರ ಮಕ್ಕಳ ಸ್ವತಂತ್ರ ಬದುಕಿಗಾಗಿ ಇತರರನ್ನು ಮದುವೆಯಾಗುತ್ತಿದ್ದರು.

ಇತರರು ಆಧ್ಯಾತ್ಮಿಕ ನಾಯಕರಾಗಿ ಅಥವಾ ಕ್ರಾಂತಿಗಳು ಮತ್ತು ದಂಗೆಗಳಲ್ಲಿ ಹಾಗೂ ಕಾನೂನು ಯುದ್ಧಗಳಲ್ಲಿ ಭಾಗವಹಿಸಿ ತಮ್ಮನ್ನು ತಾವು ಬಂಧಮುಕ್ತರಾಗಿಸುವಂತೆ ಪ್ರಯತ್ನಿಸಿದರು. ಈ ಹೀನಾಯ ಗುಲಾಮಗಿರಿಯ ವಿರುದ್ಧ ಅವರು ಹೋರಾಡಿದರು. ಇವರ ಹೋರಾಟದ ಕೆಲವು ಘಟನೆಗಳು ತಿಳಿಯದಂತಿದೆ.

 

Recent News

Back To Top
error: Content is protected !!