ನವದೆಹಲಿ: 2014-15 ರ ಆರ್ಥಿಕ ನೆರವು ನೀಡಿದ ಪ್ರಮುಖ 5 ರಾಷ್ಟ್ರಗಳ ಹೆಸರನ್ನು ನೇಪಾಳ ಸರ್ಕಾರ ಬಿಡುಗಡೆ ಮಾಡಿದ್ದು, ಭಾರತದ ಹೆಸರನ್ನು ಈ ಪಟ್ಟಿಯಿಂದ ಕೈಬಿಟ್ಟಿದೆ.
ಈ ಪಟ್ಟಿಯಲ್ಲಿ ಚೀನಾ 250 ಕೋಟಿ ರೂ. ನೆರವು ನೀಡಿದ್ದು ಮೊದಲ ಸ್ಥಾನದಲ್ಲಿದೆ. ಇಂಗ್ಲೆಂಡ್, ಅಮೇರಿಕಾ, ಜಪಾನ್ ರಾಷ್ಟ್ರಗಳು ನಂತರದ ಸ್ಥಾನದಲ್ಲಿವೆ. ಭಾರತ 150 ಕೋಟಿ ರೂ. ನೆರವು ನೀಡಿದೆ .ಕಳೆದ 5 ವರ್ಷಗಳಲ್ಲಿ ಇದೇ ಮೊದಲ ಬಾರಿ ಆರ್ಥಿಕ ನೆರವು ನೀಡಿದ ಟಾಪ್ 5 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ತನ್ನ ಸ್ಥಾನವನ್ನು ಕಳೆದುಕೊಂಡಿದೆ.
2006 ರಲ್ಲಿ ನೇಪಾಳದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ವಿಚಾರದಲ್ಲಿ ಅಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳನ್ನು ಒಂದು ಮಾಡುವಲ್ಲಿ ಭಾರತ ಪ್ರಮುಖ ಪಾತ್ರವಹಿಸಿದ್ದು , ಆಗ ಭಾರತಕ್ಕೆ ಪ್ರಶಂಸೆಯ ಮಾಹಾಪೂರವನ್ನು ವ್ಯಕ್ತಪಡಿಸಿತ್ತು. ತದನಂತರ ಆದ ರಾಜಕೀಯ ಬದಲಾವಣೆಯಲ್ಲಿ ಪಕ್ಷಗಳೊಳಗೆ ಬಿನ್ನಮತ ಕಾಣಿಸಿಕೊಂಡಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪ್ರವಾಹ, ಭೂಕಂಪ ಪೀಡಿತ ಪ್ರದೇಶಗಳ ಮರುನಿರ್ಮಾಣಕ್ಕೆ 10 ಸಾವಿರ ಕೋಟಿ ನೆರವು ನೀಡಿದ್ದು, ಚೀನಾ 5000 ಕೋಟಿ ನೆರವನ್ನು ನೀಡಿದೆ. ಇತರ ರಾಷ್ಟ್ರಗಳಿಂದ ಹೆಚ್ಚಿನ ನೆರವು ನೇಪಾಳಕ್ಕೆ ದೊರೆತಿದೆ.
ಇತ್ತೀಚೆಗೆ ನೇಪಾಳದ ಕಾಂಗ್ರೆಸ್ ಮುಖ್ಯಸ್ಥ ಶೇರ್ ಬಹಾದ್ದೂರ್ ದೇವುಬಾ ಹಾಗೂ ಮಾವೋವಾದಿ ಮುಖಂಡ ಕೆ.ಬಿ. ಮಹಾರಾ ಭಾರತ ಭೇಟಿ ಬಳಿಕ ಹಿಂದಿರುಗುತ್ತಿದ್ದಂತೆ ನೇಪಾಳ ಸರ್ಕಾರ ಪತನಕ್ಕೆ ಭಾರತ ಪ್ರಯತ್ನ ನಡೆಸುತ್ತಿದೆ ಎಂದು ದೂಷಿಸಲಾಗಿತ್ತು. ಇನ್ನು ನೇಪಾಳ ಅಧ್ಯಕ್ಷೆ ಬಿದ್ಯಾ ಭಂಡಾರಿ ಭಾರತ ಭೇಟಿಯನ್ನು ರದ್ದುಗೊಳಿಸಿದ್ದಾರೆ.
ಚೀನಾದತ್ತ ಮುಖಮಾಡುತ್ತಿರುವ ನೇಪಾಳ : ಸಂವಿಧಾನ ಅನುಮೋದನೆ ಗೊಂಡ ಸಂದರ್ಭ ಮಧೇಸಿ ಜನಾಂಗದ ಪ್ರತಿಭಟನೆ ಮತ್ತು ಗಡಿಯಲ್ಲಿ ವಹಿವಾಟು ಸ್ಥಗಿತಗೊಂಡಿದ್ದು ಉಭಯ ದೇಶಗಳ ನಡುವೆ ಸಂಬಂಧ ಹಳಸಲು ಕಾರಣವಾಗಿದ್ದು, ಅಗತ್ಯ ಸಾಮಗ್ರಿ ಗಳನ್ನು ಚೀನಾ ಪೂರೈಸಿನೇಪಾಳದತ್ತ ಸ್ನೇಹದ ಹಸ್ತಚಾಚಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.