ನವದೆಹಲಿ: ಸಾರ್ವಜನಿಕ ಬಳಕೆಗಾಗಿ ನಾಸಾ 56 ಪೇಟೆಂಟ್ ತಂತ್ರಜ್ಞಾನವನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ನಾಸಾ ಈಗಾಗಲೇ ಅವಧಿ ಮುಗಿದಿರುವ ಇತರ ಸಾವಿರಾರು ಪೇಟೆಂಟ್ಗಳ ಮರುಬಳಕೆಗೆ ಡಾಟಾಬೇಸ್ ಅನಾವರಣಗೊಳಿಸಿದೆ. ಈ ಡಾಟಾಬೇಸ್ ಹಲವಾರು ತಂತ್ರಜ್ಞಾನಗಳನ್ನು ಡೌನ್ಲೋಡ್ ಮಾಡಲು ಸಹಕರಿಸಲಿದೆ.
ಈ ತಂತ್ರಜ್ಞಾನಗಳು ಬಿಗೆಲೋ ಏರೋಪೇಸ್ ಸ್ಪೇಸ್ ಎಕ್ಸ್, ರೆಡ್ವರ್ಕ್ಸ್ ಮುಂತಾದ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಕಂಪೆನಿಗಳಿಗೆ ಲಾಭದಾಯಕವಾಗಲಿದೆ. ಈ ತಂತ್ರಜ್ಞಾನವನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡುವ ಮೂಲಕ ಉದ್ಯಮಿಗಳು ನಾಸಾ ತಂತ್ರಜ್ಞಾನವನ್ನು ವಾಣಿಜ್ಯೀಕರಣಕ್ಕೆ ಹೊಸ ಅನ್ವೇಷಣೆಗಳಿಗೆ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ನಾಸಾ ತಂತಜ್ಞಾನ ವರ್ಗಾವಣೆ ಕಾರ್ಯನಿರ್ವಾಹಕ ಡೇನಿಯಲ್ ಲೋಕ್ನಿ ತಿಳಿಸಿದ್ದಾರೆ.
ನಾಸಾದ ಹೊಸ ನಾಸಾ ಪೇಟೆಂಟ್ ಪೋರ್ಟ್ಫೋಲಿಯೋ ಡಾಟಾಬೇಸ್ ವಿಜ್ಞಾನ, ಸಂವಹನ, ಇಲೆಕ್ಟ್ರಾನಿಕ್, ಉಪಕರಣ, ಉತ್ಪಾದನೆ, ಔಷಧ ಮತ್ತು ಜೈವಿಕ ತಂತ್ರಜ್ಞಾನ, ಯಾಂತ್ರಿಕ ಮತ್ತು ದ್ರವ್ಯ ವ್ಯವಸ್ಥೆ ಮುಂತಾದ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನಗಳನ್ನು ಹೊಂದಿದೆ.
ಈ ಹಿಂದೆ ನಾಸಾ ಅವಧಿ ಮುಗಿದ ಪೇಟೆಂಟ್ಗಳನ್ನು ಬಳಸಲು ಸಣ್ಣ ಸಂಸ್ಥೆಗಳಿಗೆ ಅನುಮತಿ ನೀಡಿತ್ತು. ಆದರೆ ಈ ಬಾರಿ 56 ಪೇಟೆಂಟ್ಗಳ ಸಂಗ್ರಹಗಳ ಬಳಕೆಗೆ ಅನುವು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.