ಚೆನ್ನೈ: ಮೇ 16ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜೆ.ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ 164 ಸೀಟುಗಳನ್ನು ಗೆಲ್ಲಲಿದೆ. ಡಿಎಂಕೆ ಪಕ್ಷ 66 ಸೀಟುಗಳನ್ನು ಗೆಲ್ಲಲಿದೆ. ಇತರೆ ಪಕ್ಷ 4 ಸೀಟ್ಗಳನ್ನು ಗೆಲ್ಲಲಿದೆ ಎಂದು ತಮಿಳು ನ್ಯೂಸ್ ಚಾನೆಲ್ ನಡೆಸಿದ ಸಮೀಕ್ಷೆ ತಿಳಿಸಿದೆ.
ಪುತೀಯ ಥಳೈಮುರೈ-ಎಪಿಟಿ ಚಾನೆಲ್ ನಡೆಸಿದ ಜನಾಭಿಪ್ರಾಯ ಸಮೀಕ್ಷೆಯಲ್ಲಿ ಎಐಎಡಿಎಂಕೆ ಪಕ್ಷ ಶೇ.38.58 ವೋಟ್ಗಳನ್ನು ಗೆಲ್ಲಲಿದ್ದು, ಡಿಎಂಕೆ ಶೇ.32.11, ಡಿಎಂಡಿಕೆ-ಟಿಎಂಸಿ-ಪಿಡಬ್ಲ್ಯೂಎ ಶೇ.8.55, ಪಿಎಂಕೆ ಶೇ.4.46, ನಾಮ್ ಥಮೈಜಾರ್ ಶೇ.2.12 ಹಾಗೂ ಬಿಜೆಪಿ ಶೇ.1.96 ವೋಟ್ಗಳನ್ನು ಗೆಲ್ಲಲಿದೆ ಎಂದು ತಿಳಿಸಿದೆ.
ಎಪ್ರಿಲ್ 18ರಿಂದ ಮೇ 4ರ ವರೆಗೆ ಸುಮಾರು 5000 ಮಂದಿಯ ಸಮೀಕ್ಷೆ ನಡೆದಿದ್ದು, ಇದನ್ನು ಮೇ 9ರಂದು ಬಿಡುಗಡೆಗೊಳಿಸಲಾಯಿತು.
ಜಯಲಲಿತಾ ಶೇ.38.9, ಎಂ. ಕರುಣಾನಿಧಿ ಶೇ.31.89, ವಿಜಯಕಾಂತ್ ಶೇ.8.59, ಅಂಬುಮಣಿ ರಾಮದಾಸ್ ಶೇ.5.03, ನಾಮ್ ಥಮೈಜಾರ್ನ ಸೀಮನ್ ಶೇ.2.40 ವೋಟ್ಗಳೊಂದಿಗೆ ನೆಚ್ಚಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.