ನವದೆಹಲಿ : ನೀಟ್ ಪರೀಕ್ಷೆಯ ಕುರಿತು ರಾಜ್ಯಗಳು ಸಲ್ಲಿಸಿರುವ ಅರ್ಜಿಗೆ ಹಿನ್ನಡೆಯಾಗಿದ್ದು, ರಾಜ್ಯಗಳ ವಾದವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ವೈದಕೀಯ ಮತ್ತು ದಂತ ವೈದಕೀಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಟ್ಟದಲ್ಲಿ ಒಂದೇ ಪರೀಕ್ಷೆ ನಡೆಯಲಿದೆ. 7 ರಾಜ್ಯಗಳು ಸಲ್ಲಿಸಿದ ಅರ್ಜಿಯ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್ ನೀಟ್ ಪರೀಕ್ಷೆಯೇ ಅಂತಿಮವೆಂದು ಹೇಳಿದೆ.
ನೀಟ್ನ ಮೊದಲ ಬಾರಿಯ ಪರೀಕ್ಷೆಗಳು ಈಗಾಗಲೇ ಮುಗಿದಿದ್ದು, ಈಗ ಜುಲೈ 24 ರಂದು ಎರಡನೇ ಬಾರಿಯ ಪರೀಕ್ಷೆ ನಡೆಯಲಿದೆ. ಮೊದಲ ಬಾರಿ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಎರಡನೇ ಬಾರಿಗೂ ಪರಿಕ್ಷೆಯನ್ನು ಬರೆಯಬಹುದು. ಆದರೆ ಆಗ ಎರಡನೇ ಬಾರಿಗೆ ಬರೆದ ಅಂಕಗಳನ್ನು ಪರಿಗಣಿಸಲಾಗುವುದೇ ಹೊರತು ಮೊದಲ ಬಾರಿಗೆ ಬರೆದ ಅಂಕಗಳನ್ನಲ್ಲ ಎಂದು ಕೋರ್ಟ್ ಹೇಳಿದೆ.
ಪ್ರಾದೇಶಿಕ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ನೀಡಲು ಸಿಬಿಎಸ್ಇ ಮತ್ತು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಒಪ್ಪಿಗೆ ಸೂಚಿಸಿದ್ದು, ತಮಿಳು, ತೆಲುಗು, ಮರಾಠಿ, ಗುಜರಾತಿ, ಅಸ್ಸಾಮಿ, ಉರ್ದು, ಬಂಗಾಳಿ ಭಾಷೆಗಳಲ್ಲಿ ಪಶ್ನೆಪತ್ರಿಕೆ ನೀಡಲು ಚಿಂತನೆ ನಡೆಸಿದೆ.
ಅಲ್ಲದೇ ಎರಡನೇ ಹಂತದ ಪರೀಕ್ಷಾ ದಿನಾಂಕವನ್ನು ಸಿಬಿಎಸ್ಇ ಮತ್ತು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಬಯಸಿದಲ್ಲಿ ಬದಲಾಯಿಸಬಹುದು ಎಂದು ಕೋರ್ಟ್ ತಿಳಿಸಿದೆ ಎಂದು ತಿಳಿದು ಬಂದಿದೆ. ನೀಟ್ ಪರೀಕ್ಷೆ ಫಲಿತಾಂಶವು ಆಗಸ್ಟ್ 17 ರಂದು ಪ್ರಕಟಿಸಲಾಗುವುದು ಹಾಗೂ ಸೆ. 30 ರೊಳಗೆ ಪ್ರವೇಶ ಕಾರ್ಯಗಳು ಪೂರ್ಣಗೊಳಿಸಲು ಯೋಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.