ನವದೆಹಲಿ: ಐಸಿಐಜೆಯು ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ತೆರಿಗೆ ವಂಚಿತ ಕಂಪೆನಿಗಳು, ಹಾಗೂ 2000 ಹೆಸರುಗಳನ್ನು ಹೊಂದಿದ ವ್ಯಕ್ತಿಗಳ ವಿಳಾಸ ಮತ್ತಿತರ ಮಾಹಿತಿ ಹೊಂದಿದ ದಾಖಲೆ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪತ್ರಕರ್ತರ ಅಂತಾರಾಷ್ಟ್ರೀಯ ತನಿಖಾ ಒಕ್ಕೂಟ (ಐಸಿಐಜೆ) ನೇವಡಾದಿಂದ ಹಾಂಗ್ಕಾಂಗ್ ಹಾಗೂ ಬ್ರಿಟಿಷ್ ವರ್ಜಿನ್ ದ್ವೀಪದವರೆಗಿನ ಸುಮಾರು 2,14,000 ವಿದೇಶಿ ಸಂಸ್ಥೆಗಳ ದಾಖಲೆ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ.
ಇದು ’ಪನಾಮಾ ಪೇಪರ್ಸ್’ ತನಿಖೆಯ ಭಾಗವಾಗಿ ವಿದೇಶಿ ಸಂಸ್ಥೆಗಳು, ಅದರ ಹಿಂದಿರುವ ಪ್ರಮುಖ ವ್ಯಕ್ತಿಗಳು, ಅದರ ಮಾಲೀಕರ ಹೆಸರುಗಳನ್ನು ಒಳಗೊಂಡಿದೆ ಎಂದು ಒಕ್ಕೂಟ ತಿಳಿಸಿದೆ.
ಈ ದಾಖಲೆಗಳಲ್ಲಿ ಭಾರತದ 22 ವಿದೇಶಿ ಸಂಸ್ಥೆಗಳು, 1046 ಅಧಿಕಾರಿಗಳು ಮತ್ತು ಮಾಲೀಕರು, 22 ಮಧ್ಯವರ್ತಿಗಳು, 828 ವಿಳಾಸಗಳನ್ನು ಮೆಟ್ರೋಪೊಲಿಟನ್ ನಗರಗಳಾದ ಚೆನ್ನೈ, ದೆಹಲಿ, ಮುಂಬಯಿ, ಕೋಲ್ಕತಾದೆಲ್ಲೆಡೆಗಳಲ್ಲಿ ಇದೆ.
ಪನಾಮಾ ಪೇಪರ್ಸ್ನ ಬಿಡುಗಡೆಯಾದ ಮೊದಲ ಆವೃತ್ತಿಯಲ್ಲಿ ನಿರ್ದಿಷ್ಟ ದೇಶಗಳ ಬಗ್ಗೆ ಮಾಹಿತಿಗಳ ನಕಲುಗಳನ್ನು ಹೊಂದಿರಬಹುದು. ವಿದೇಶಿ ಕಂಪೆನಿಗಳು ಹಾಗೂ ಟ್ರಸ್ಟ್ಗಳನ್ನು ಕಾನೂನುಬದ್ಧವಾಗಿ ಬಳಸಲಾಗಿದೆ ಎಂದು ಕಾನೂನು ಸಂಸ್ಥೆಯ ಮೊಸ್ಸ್ಯಾಕ್ ಫೋನ್ಸೇಕಾ ತಿಳಿಸಿದ್ದಾರೆ.
ಕಳೆದ ತಿಂಗಳು ಬಿಡುಗಡೆಗೊಂಡ ಮೊದಲ ಆವೃತ್ತಿಯಲ್ಲಿ ಭಾರತದ 500 ಸಂಸ್ಥೆಗಳ ಪಟ್ಟಿ ಬಿಡುಗಡೆಯಾಗಿದ್ದು, ಇದರ ತನಿಖೆಗೆ ಭಾರತ ಮಲ್ಟಿ ಏಜೆನ್ಸಿ ಗ್ರೂಪ್ ರೂಪಿಸಿದ್ದು, ಇದು ಆದಾಯ ತೆರಿಗೆ, ಆರ್ಬಿಐ, ವಿದೇಶಿ ತೆರಿಗೆ, ಕೇಂದ್ರ ತನಿಖಾ ಸಂಸ್ಥೆಗಳ ಅಧಿಕಾರಿಗಳನ್ನು ಒಳಗೊಂಡಿದೆ.
ಈ ಸಂಸ್ಥೆಗಳಿಗೆ ತೆರಿಗೆ ಇಲಾಖೆ ನೋಟಿಸ್ ಜಾರಿಗೊಳಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.