ನವದೆಹಲಿ: ಮೇ 9 ರಂದು ಬುಧ ಗ್ರಹವು ಸೂರ್ಯ ಹಾಗೂ ಭೂಮಿಯ ನಡುವೆ ಬರಲಿದ್ದು, ಆಗಸದಲ್ಲಿ ಬುಧ ಗ್ರಹವನ್ನು ವೀಕ್ಷಿಸುವ ಅವಕಾಶವನ್ನು ಭಾರತೀಯರು ಪಡೆದಿದ್ದಾರೆ.
ಸಂಜೆ 4.43 ರಿಂದ ಸೂರ್ಯಾಸ್ತಮಾನದ 7.01 ನಿಮಿಷದ ನಡುವೆ ಬುಧ ಗ್ರಹವು ಸೂರ್ಯನನ್ನು ಹಾದು ಹೋಗಲಿದೆ. 2 ಗಂಟೆ 45 ನಿಮಿಷಗಳ ಕಾಲ ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಇದು ಕಾಣಸಿಗಲಿದೆ. 100 ವರ್ಷಗಳಲ್ಲಿ ಕೇವಲ 12-13 ಬಾರಿ ಮಾತ್ರ ಬುಧ ಗ್ರಹ ಆಗಸದಲ್ಲಿ ಕಾಣಸಿಗಲಿದ್ದು, ಬುಧ ಗ್ರಹವು ಒಂದು ಚುಕ್ಕಿಯಂತೆ ಕಾಣಲಿದೆ.
ಬುಧ ಗ್ರಹವು ಪ್ರತಿ 88 ದಿನಗಳಲ್ಲಿ ತನ್ನ ಕಕ್ಷೆಯಲ್ಲಿ ಸೂರ್ಯನಿಗೆ ಒಂದು ಸುತ್ತು ಪೂರ್ಣಗೊಳಿಸುತ್ತಿದ್ದು, 116 ದಿನಗಳಿಗೊಮ್ಮೆ ಭೂಮಿ ಮತ್ತು ಸೂರ್ಯನ ನಡುವೆ ಹಾದು ಹೋಗುತ್ತದೆ.
ಇನ್ನು 16 ವರ್ಷಗಳ ಬಳಿಕ ಅಂದರೆ ನವೆಂಬರ್ 2032 ರಲ್ಲಿ ಭಾರತೀಯರಿಗೆ ಬುಧ ಗ್ರಹ ಕಾಣಿಸಿಕೊಳ್ಳಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ಧಾರೆ.
ಬುಧ ಗ್ರಹವನ್ನು ವೀಕ್ಷಿಸಲು ಅಸಂಖ್ಯಾತ ಜನರು ಈಗಾಗಲೇ ನೆರೆದಿದ್ದು, ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.