ನವದೆಹಲಿ: ದೇಶದ 55,669 ಗ್ರಾಮಗಳಿಗೆ ಮಾರ್ಚ್ 2019 ರ ಒಳಗಾಗಿ ಮೊಬೈಲ್ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಜೊತೆಗೆ ಸೆಪ್ಟೆಂಬರ್ 2017 ರ ಒಳಗೆ ಈಶಾನ್ಯ ಭಾರತದ 8,621 ಗ್ರಾಮಗಳಿಗೆ ಮೊಬೈಲ್ ಸಂಪರ್ಕ ಒದಗಿಸಲು 321 ಟವರ್ಗಳ ಸ್ಥಾಪನೆಗೆ ಯೋಜನೆ ರೂಪಿಸಿದೆ ಎಂದು ಟೆಲಿಕಾಂ ಇಲಾಖೆ ತಿಳಿಸಿದೆ.
ಈಶಾನ್ಯ ಭಾಗದ ಗ್ರಾಮಗಳಿಗೆ 5,336.18 ಕೋಟಿ ರೂ. ವೆಚ್ಚದಲ್ಲಿ ದೂರಸಂಪರ್ಕ ಅಭಿವೃದ್ಧಿ ಯೋಜನೆಯನ್ನು ಈಗಾಗಲೇ ಅಂಗೀಕರಿಸಲಾಗಿದೆ. ಇನ್ನು ಎಡಪಕ್ಷ ಆಡಳಿತದ ಗ್ರಾಮಗಳಲ್ಲಿ ಗೃಹ ಸಚಿವಾಲಯ ಗುರುತುಪಡಿಸಿದ 2199 ಟವರ್ಗಳ ಪೈಕಿ 1517 ಟವರ್ಗಳು ಕಾರ್ಯಾರಂಭಗೊಂಡಿವೆ ಎಂದು ಟೆಲಿಕಾಂ ಇಲಾಖೆ ತಿಳಿಸಿದೆ.
ಗಾಮೀಣ ಭಾರತದ 2.50 ಲಕ್ಷ ಗ್ರಾಮ ಪಂಚಾಯತ್ಗಳಿಗೆ ಭಾರತ್ನೆಟ್ ಯೋಜನೆ ಮೂಲಕ ಇ-ಆಡಳಿತ ಸೇವೆ, ಇ-ಕಾಮರ್ಸ್, ಟೆಲಿ-ಮೆಡಿಸಿನ್, ಟೆಲಿ-ಎಜ್ಯುಕೇಶನ್, ಹಣಕಾಸು ಸೇವೆ ಮತ್ತಿತರ ಸೇವೆಗಳನ್ನು ಒದಗಿಸಲಿದೆ. ಸದ್ಯ 48,199 ಗ್ರಾಮ ಪಂಚಾಯತ್ಗಳಿಗೆ ಆಪ್ಟಿಕ್ ಫೈಬರ್ ತಂತಿಗಳನ್ನು ಅಳವಡಿಸಲಾಗಿದೆ ಎಂದು ಇಲಾಖೆ ಹೇಳಿದೆ.
ಮೊಬೈಲ್ ಸೇವೆ ಹಾಗೂ ಕೇಬಲ್ ಟಿವಿ ಸೇವಾದಾರರಿಗೆ ಇದು ಸಹಾಯಕವಾಗಲಿದೆ ಎಂದು ಟೆಲಿಕಾಂ ಇಲಾಖೆ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.