ಮುಂಬಯಿ: ವಿಶ್ವದ ಪ್ರಥಮ ಪ್ರಾದೇಶಿಕ OS ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತದ ಇಂಡಸ್ ಆಪರೇಟಿಂಗ್ ಸಿಸ್ಟಮ್ ಸ್ಮಾರ್ಟ್ಫೋನ್ಗಳಿಗೆ ಬಳಸುವ ಆಪರೇಟಿಂಗ್ ಸಿಸ್ಟಮ್ ಆ್ಯಪಲ್ ಹಾಗೂ ಮೈಕ್ರೋಸಾಫ್ಟ್ನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ತಲುಪಿದೆ.
ಕೌಂಟರ್ಪಾಂಯಿಂಟ್ ನಡೆಸಿದ ಸಂಶೋಧನೆ ಪ್ರಕಾರ ಭಾರತದ ಇಂಡಸ್ ಆಪರೇಟಿಂಗ್ ಸಿಸ್ಟಮ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಕಳೆದ ಜನವರಿಯಿಂದ ಮಾರ್ಚ್ವರೆಗೆ ಶೇ. 5.6 ರಷ್ಟು ಶೇರುಗಳನ್ನು ಹೊಂದಿದೆ. ಅದೇ ಆ್ಯಪಲ್ ಓಎಸ್ ಶೇ. 2.5ರೊಂದಿಗೆ 5 ಸ್ಥಾನ ಹಾಗೂ ಮೈಕ್ರೋಸಾಫ್ಟ್ ಶೇ. 0.3 ಶೇರುಗಳೊಂದಿಗೆ 7 ನೇ ಸ್ಥಾನದಲ್ಲಿದೆ.
ಸದ್ಯ 50 ಮಿಲಿಯನ್ ಗ್ರಾಹಕರಿದ್ದು, 2018 ರ ಒಳಗಾಗಿ 100 ಮಿಲಿಯನ್ ಗ್ರಾಹಕರನ್ನು ಹೊಂದುವ ಗುರಿ ಹೊಂದಿದೆ ಎಂದು ಇಂಡಸ್ ಆಪರೇಟಿಂಗ್ ಸಿಸ್ಟಮ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ದೇಶ್ಮುಖ್ ಹೇಳಿದ್ದಾರೆ.
ಇಂಡಸ್ ಆಪರೇಟಿಂಗ್ ಸಿಸ್ಟಮ್ನ್ನು ಮೈಕ್ರೋಮ್ಯಾಕ್ಸ್ ಸ್ಮಾರ್ಟ್ಫೋನ್ಗಳಿಗೆ ಬಳಸಲಾಗುತ್ತಿದ್ದು, ಆಂಡ್ರಾಯ್ಡ್ ಓಎಸ್ ಶೇ. 83.3 ಶೇರುಗಳೊಂದಿಗೆ ಪ್ರಥಮ ಸ್ಥಾನದಲ್ಲಿದೆ. ಚೀನಾದ ಜಿಯೋಮಿ ಓಎಸ್ 3ನೇ ಸ್ಥಾನದಲ್ಲಿದ್ದರೆ, ಸೈನೋಜೆನ್ ಓಎಸ್ ಶೇ.4.1 ಶೇರುಗಳೊಂದಿಗೆ 4ನೇ ಸ್ಥಾನದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.