ನವದೆಹಲಿ: ಪ್ರಸಕ್ತ ಬಜೆಟ್ನಲ್ಲಿ ಮೊಬೈಲ್ ಬ್ಯಾಟರಿ, ಚಾರ್ಜರ್, ಹೆಡ್ಫೋನ್ ಮತ್ತಿತರ ಮೊಬೈಲ್ ಉಪಕರಣಗಳ ಮೇಲಿನ ಸುಂಕವನ್ನು ಸರ್ಕಾರ ಹಿಂಪಡೆದಿದೆ .
ಸ್ಥಳೀಯವಾಗಿ ತಯಾರಿಸಲಾಗುತ್ತಿರುವ ಈ ಮೊಬೈಲ್ ಉಪಕರಣಗಳಿಗೆ ದೇಶೀಯ ಪೂರೈಕೆದಾರರ ಕೊರತೆ ಇದ್ದು, ಮೊಬೈಲ್ ತಯಾರಕರು ಇದರ ಸುಂಕ ಕಡಿತಗೊಳಿಸುವ ನಿರ್ಧಾರ ಕೈಗೊಂಡಿದ್ದರು.
ಈ ಹಿಂದೆ ಬಜೆಟ್ನಲ್ಲಿ ಶೇ.10 ಮೂಲ ಕಸ್ಟಮ್ಸ್ ಸುಂಕ ಹೇರಲಾಗಿದ್ದು, ತಿದ್ದುಪಡಿ ಮೂಲಕ ಶೂನ್ಯಕ್ಕೆ ಇಳಿಸಲಾಗಿದೆ. ಅಲ್ಲದೇ ವಿಶೇಷ ಹೆಚ್ಚುವರಿ ಸುಂಕ ಶೇ.4ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಆದರೆ ಬಜೆಟ್ನಲ್ಲಿ ಹೇರಲಾಗಿದ್ದ ಶೇ.12.5 ಆಮದು ಸುಂಕವನ್ನು ಸರ್ಕಾರ ಉಳಿಸಿಕೊಂಡಿದೆ.
ಇನ್ನು ಮೊಬೈಲ್ ಉತ್ಪಾದನೆಯಲ್ಲಿ ಪ್ರಮುಖ ಉಪಕರಣವಾಗಿರುವ ಮುದ್ರಿತ ಸರ್ಕ್ಯೂಟ್ ಬೋರ್ಡ್ ಮೇಲಿನ ಶೇ.2 ಆಮದು ಸುಂಕವನ್ನೂ ಹಿಂಪಡೆಯಲಾಗಿದೆ.
ಮೊಬೈಲ್ ತಯಾರಕರು ಉಪಕರಣಗಳ ಮೇಲೆ ಯಾವುದೇ ಸುಂಕ ಹೇರುವುದರ ವಿರುದ್ಧ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.