ನವದೆಹಲಿ: ಭಾರತದಲ್ಲಿ ಸಾಮಾಜಿಕ ಕ್ಷೋಭೆ ಸೃಷ್ಟಿಸುತ್ತಿರುವ ದಾವೂದ್ ಇಬ್ರಾಹಿಂನ ಸಹಚರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಶನಿವಾರ ಚಾರ್ಜ್ಶೀಟ್ ಸಲ್ಲಿಸಲಿದೆ.
’ಡಿ ಕಂಪೆನಿ’ ಯ ಗುಂಪಿನ ಸದಸ್ಯರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್), ಬಿಜೆಪಿ, ವಿಶ್ವಹಿಂದೂ ಪರಿಷತ್ ನಾಯಕರು ಹಾಗೂ ಭಾರತದಲ್ಲಿಯ ಹಲವು ಚರ್ಚ್ಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಜುಲೈ ಮತ್ತು ಆಗಸ್ಟ್ ೨೦೧೫ರ ನಡುವೆ ದಾವೂದ್ ಸಹಚರರಾದ ಜಾವೆದ್ ಚಿಕ್ನಾ, ಜಾಹಿದ್ ಶೇಖ್ ಮಿಯಾ ಮತ್ತಿತರರಿಂದ ಈ ಪಿತೂರಿ ನಡೆಸಲಾಗಿತ್ತು. ಜಾವೆದ್ ಚಿಕ್ನಾನನ್ನು ಭಾರತಕ್ಕೆ ಒಪ್ಪಿಸುವಂತೆ ಎನ್ಐಎ ಪಾಕಿಸ್ಥಾನಕ್ಕೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ದಾವೂದ್ ಸಹಚರರು ನವೆಂಬರ್ 2015ರಲ್ಲಿ ಬಲ ಪಂಥೀಯರಾದ ಶಿರೀಶ್ ಬಂಗಲಿ ಹಾಗೂ ಪ್ರಜ್ಞೇಶ್ ಮಿಸ್ತ್ರಿಯನ್ನು ಹತ್ಯೆಗೈದಿದ್ದು, ಈ ಸಂಬಂಧ ಹಾಜಿ ಪಟೇಲ್, ಎಂ.ಡಿ. ಯುನುಸ್ ಶೇಖ್, ಅಬ್ದುಲ್ ಸಮದ್, ಅಬಿದ್ ಪಟೇಲ್, ಎಂ.ಡಿ. ಅಲ್ತಾಫ್ ಮತ್ತಿತರರನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ನಾ ಸಹೋದರ ಹಾಜಿ ಪಟೇಲ್ಗೆ ಈ ಸಂಬಂಧ 50 ಲಕ್ಷ ನೀಡಲಾಗಿತ್ತು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.