ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತದಲ್ಲಿ ಸಾಮಾಜಿಕ ಅಸ್ಥಿರತೆಯನ್ನು ಸೃಷ್ಟಿಸಿ ಆ ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಮಾಡಿದ್ದ ಎಂಬುದಾಗಿ ರಾಷ್ಟ್ರೀಯ ತನಿಖಾ ದಳ ತಿಳಿಸಿದೆ.
ದಾವೂದ್ನ ನಟೋರಿಯಸ್ ಡಿ-ಕಂಪನಿಯ 10 ಸದಸ್ಯರಿಗೆ ಈ ಕಾರ್ಯವನ್ನು ಒಪ್ಪಿಸಲಾಗಿತ್ತು. ಅಸ್ಥಿರತೆ, ಅಶಾಂತಿಯನ್ನು ಸೃಸ್ಟಿಸುವುದು, ಆರ್ಎಸ್ಎಸ್ ನಾಯಕರನ್ನು, ಚರ್ಚ್ಗಳನ್ನು ಟಾರ್ಗೆಟ್ ಮಾಡಲು ಇವರಿಗೆ ಸೂಚನೆಯನ್ನು ನೀಡಲಾಗಿತ್ತು.
2014ರಲ್ಲಿ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ದಾವೂದ್ ಈ ಕಾರ್ಯಕ್ಕೆ ಮುಂದಾಗಿದ್ದ ಎಂಬುದನ್ನು ರಾಷ್ಟ್ರೀಯ ತನಿಖಾ ದಳ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ. ಇದನ್ನು ಶಣಿವಾರ ಅದು ಸಲ್ಲಿಕೆ ಮಾಡುವ ಸಾಧ್ಯತೆ ಇದೆ.
ಆರ್ಎಸ್ಎಸ್ ನಾಯಕರನ್ನು, ಚರ್ಚ್ಗಳನ್ನು ಟಾರ್ಗೆಟ್ ಮಾಡಲು ಶೂಟರ್ಗಳನ್ನು ನೇಮಿಸಲಾಗಿತ್ತು. ದೇಶದಲ್ಲಿ ಕೋಮು ಸಂಘರ್ಷವನ್ನು ಉಂಟು ಮಾಡುವುದು ಇವರ ಮುಖ್ಯ ಕಾರ್ಯವಾಗಿತ್ತು ಎನ್ನಲಾಗಿದೆ. ಅಲ್ಲದೇ ಇವರು ಶಿರಿಶ್ ಬಂಗಾಲಿ ಮತ್ತು ಪ್ರಗ್ನೇಶ್ ಮಿಸ್ತ್ರಿ ಎಂಬ ಇಬ್ಬರನ್ನು ೨೦೧೫ರ ನವೆಂಬರ್ನಲ್ಲಿ ಕೊಲೆ ಮಾಡಿದ್ದರು ಎಂದು ಅದು ಹೇಳಿದೆ.
ಯಾಕೂಬ್ ಮೆಮೋನ್ನನ್ನು ಗಲ್ಲಿಗೇರಿಸಿದ ಪ್ರತಿಕಾರವಾಗಿ ಈ ಹತ್ಯೆ ಮಾಡಿದ್ದೇವೆ ಎಂದು ಬಳಿಕ ಇವರು ಘೋಷಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.