ಇಂದು ವಿಶ್ವ ಪಾಸ್ವರ್ಡ್ ದಿನ. ಮೇ ತಿಂಗಳ ಮೊದಲ ಗುರುವಾರದಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಉತ್ತಮ ಪಾಸ್ವರ್ಡ್ ರಚನೆ ಪದ್ಧತಿಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
ಇಂದಿನ ಡಿಜಿಟಲ್ ತಂತ್ರಜ್ಞಾನ ಯುಗದಲ್ಲಿ ಪಾಸ್ವರ್ಡ್ಗಳು ಬಹಳ ಪ್ರಾಮುಖ್ಯತೆ ಪಡೆದಿದೆ. ಇದು ನಮ್ಮ ಎಲ್ಲಾ ಆನ್ಲೈನ್ ಅಕೌಂಟ್ಗಳಿಗೆ ಗೇಟ್ಕೀಪರ್ಗಳಿದ್ದಂತೆ. ಇಂದಿನ ಇಂಟರ್ನೆಟ್ ಯುಗದಲ್ಲಿ ಹ್ಯಾಕರ್ಗಳಿಂದ ತಡೆಗಟ್ಟಲು ಬಲಿಷ್ಠವಾದ ಪಾಸ್ವರ್ಡ್ ರಚಿಸುವುದು ಮತ್ತು ಅದನ್ನು ಖಚಿತಪಡಿಸುವುದು ಬಹು ಮುಖ್ಯ.
ಇಂದು ಜನರು ಬಳಸುವ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸ್ಆಪ್ ಅಲ್ಲದೇ ವೈಯಕ್ತಿಕ ಆನ್ಲೈನ್ ಬ್ಯಾಂಕಿಂಗ್, ಇತರ ಖಾತೆಗಳು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಾಸ್ವರ್ಡ್ಗಳನ್ನು ಗೌಪ್ಯವಾಗಿರಿಸುವುದು ಅಗತ್ಯವಾಗಿದೆ.
ಪಾಸ್ವರ್ಡ್ಗಳು ಸಾಮಾನ್ಯವಾಗಿ 8 ರಿಂದ 16 ಸಂಖ್ಯೆಗಳ ವರೆಗೆ ಬಳಸಬಹುದಾಗಿದ್ದು, ಅಕ್ಷರಗಳು ಸಂಖ್ಯೆಗಳು ಹಾಗೂ ಚಿನ್ಹೆಗಳ ಮಿಶ್ರಣವಾಗಿದ್ದಲ್ಲಿ ಹೆಚ್ಚು ಗೌಪ್ಯತ್ಯೆಯನ್ನು ವಹಿಸಬಹುದು. ಅಕ್ಷರಗಳ ಮಧ್ಯದಲ್ಲಿ ಸಂಖ್ಯೆಗಳನ್ನು ಬಳಸಬಹುದು.
ಕೆಲವು ಬಾರಿ ಜನ್ಮದಿನ, ಹೆಸರು, ಕಂಪೆನಿ ಹೆಸರು, ಊರಿನ ಹೆಸರುಗಳು ಮುಂತಾದ ಅತೀ ಸುಲಭ ಪಾಸ್ವರ್ಡ್ಗಳನ್ನು ಬಳಸದಿದ್ದಲ್ಲಿ ಹೆಚ್ಚು ಸುರಕ್ಷಿತ. ಒಂದೇ ಪಾಸ್ವರ್ಡ್ನ್ನು ಹಲವು ಅಕೌಂಟ್ಗಳಿಗೆ ಬಳಸಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಬಾರಿ ಅಕೌಂಟ್ ಮೂಲಕವೇ ಮಾಹಿತಿಗಳನ್ನು ಪಡೆಯಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಅಕೌಂಟ್ಗಳನ್ನು ಪ್ರವೇಶಿಸಲು ಸಾಮಾಜಿಕ ತಾಣ ಫೇಸ್ಬುಕ್ ಅಕೌಂಟ್ಗೆ ಅವಕಾಶ ನೀಡಿದಲ್ಲಿ ಅದನ್ನು ಬಳಸುವುದು ಉತ್ತಮ.
ಮೊದಲ ಬಾರಿ ಜಿ-ಮೇಲ್ ಅಕೌಂಟ್ ಬಳಸುವಾಗ ಎರಡು ಪಾಸ್ವರ್ಡ್ಗಳನ್ನು ಬಳಸಲು ಅವಕಾಶ ನೀಡುತ್ತವೆ. ಮೊಬೈಲ್ ಸಂದೇಶದ ಮೂಲಕ ನೀಡಲಾಗುವ 6 ಸಂಖ್ಯೆಯ ಕೋಡ್ ಬಳಸಿ ಜಿ-ಮೇಲ್ ಖಾತೆ ತೆರೆಯಲು ಸೂಚಿಸಿದಲ್ಲಿ ಅದನ್ನು ಬಳಸಬಹುದು. ಇದು ಒನ್-ಟೈಮ್ ಪಾಸ್ವರ್ಡ್ ಆಗಿದೆ.
ಮೊಬೈಲ್ಗೆ ಬರುವ ಸಂದೇಶದ ಮೂಲಕವೇ ಈ ಪಾಸ್ವರ್ಡ್ ಪಡೆಯಬಹುದಾಗಿದ್ದು, ಹ್ಯಾಕರ್ಗಳು ಸುಲಭವಾಗಿ ಈ ಪಾಸ್ವರ್ಡ್ಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.