ನವದೆಹಲಿ : ಕಾಶ್ಮೀರದ ಎನ್.ಐ.ಟಿಯಲ್ಲಿ ಕಲಿಯುತ್ತಿದ್ದ 1450 ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಅವರವರ ಊರುಗಳಿಗೆ ವಾಪಾಸ್ ಕಳುಹಿಸಲಾಗಿದೆ ಎಂದು ಗೃಹ ಖಾತೆಯ ರಾಜ್ಯ ಸಚಿವ ಹರಿಭಾಯಿ ಪಾರ್ತಿ ಭಾಯಿ ಚೌಧರಿ ಅವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ಎನ್.ಐ.ಟಿಯಲ್ಲಿ 2500 ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಅದರಲ್ಲಿ 1450 ಜನರು ವಿವಿಧ ರಾಜ್ಯಗಳಿಂದ ಬಂದು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಎ.1 ರಂದು ಭಾರತ ಟಿ.20 ಸೆಮಿ ಫೈನಲ್ನಲ್ಲಿ ವೆಸ್ಟ್ಇಂಡಿಸ್ ನಿಂದ ಸೋಲನ್ನು ಅನುಭವಿಸಿತು. ಈ ಸೋಲನ್ನು ಸ್ಥಳೀಯ ವಿದ್ಯಾರ್ಥಿಗಳು ಸಂಭ್ರಮಿಸಿದ್ದು, ಇದಕ್ಕಾಗಿ ಸ್ಥಳಿಯ ವಿದ್ಯಾರ್ಥಿಗಳ ನಡುವೆ ಮತ್ತು ಹೊರ ರಾಜ್ಯದ ವಿದ್ಯಾರ್ಥಿಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು.
ಈ ವಿಷಯಕ್ಕಾಗಿ ಹೊರರಾಜ್ಯದ ವಿದ್ಯಾರ್ಥಿಗಳು ಎನ್.ಇ.ಟಿ ಕ್ಯಾಂಪಸ್ನಲ್ಲಿ ಪ್ರತಿಭಟನೆ ನಡೆಸಿ ಹೊರಹೋಗುವ ಗೇಟ್ ತನಕ ಜಾಥಾ ನಡೆಸಿದ್ದು, ಈ ಸಂದರ್ಭ ಪೋಲಿಸರು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ತಡೆಯಲು ಲಾಠಿ ಚಾರ್ಜ್ ನಡೆಸಿದ್ದರು. ಇದರಲ್ಲಿ 5-6 ಮಂದಿ ಗಾಯಗೊಂಡಿದ್ದರು. ಈ ಘಟನೆ ಬಗ್ಗೆ ಮೇಜಿಸ್ಟ್ರೇಟ್ ಮಟ್ಟದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಸದನಕ್ಕೆ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.