ಬೆಳ್ತಂಗಡಿ : ಗ್ರಾಮ ಪಂಚಾಯತಿಯೊಂದರ ಬೇಜವಾಬ್ದಾರಿತನದಿಂದಾಗಿ ಬಿಎಸ್ಎನ್ಎಲ್ ಗ್ರಾಹಕರು ಹಾಗೂ ಸಿಬ್ಬಂದಿಗಳು ಪರದಾಡುವಂತ ಸ್ಥಿತಿ ಅಳದಂಗಡಿಯ ಪೇಟೆಯಲ್ಲಿ ನಿರ್ಮಾಣವಾಗಿದೆ.
ಅಳದಂಗಡಿ ಗ್ರಾ. ಪಂಚಾಯತು, ನೀರಿನ ಪೈಪ್ ಅಳವಡಿಸಲು ಎ. 24 ರಂದು ರಾತ್ರೋರಾತ್ರಿ ಜೆಸಿಬಿಯ ಮೂಲಕ ವಾಣಿಜ್ಯ ಸಂಕೀರ್ಣವೊಂದರ ಸುತ್ತ ಪೈಪ್ ಲೈನ್ ಹಾಕಲು ಸುಮಾರು ಎರಡು ಅಡಿ ಆಳದ ಚರಂಡಿಯನ್ನು ಅಗೆಯಿಸಿತು.
ಅಗೆತ ಒಳ್ಳೆಯ ಉದ್ದೇಶಕ್ಕಾದರೂ ಅದರಿಂದ ಬಿಎಸ್ಎನ್ಎಲ್ನ ಕೇಬಲ್ಗಳು ಮಾತ್ರ ಪುಡಿಪುಡಿಯಾದವು. ಬಿಎಸ್ಎನ್ಎಲ್ ಸಿಬ್ಬಂದಿಗಳಿಗೆ ಯಾವುದೇ ಪೂರ್ವ ಸೂಚನೆ ನೀಡದೆ ಏಕಾಏಕಿ ಪಂಚಾಯತು ಆಡಳಿತ ಈ ರೀತಿ ಮಾಡಿರುವುದು ಫೋನ್ ಗ್ರಾಹಕರಲ್ಲಿ ಆಕ್ರೋಶವನ್ನುಂಟು ಮಾಡಿದೆ.
ಜೆಸಿಬಿ ಚಾಲಕ ಫೋನ್ನ ಕೇಬಲ್ ಕಾಣುತ್ತಿದ್ದರೂ ಯಾವುದೇ ಕಾಳಜಿವಹಿಸದೆ ಅಗೆದದ್ದು ನಾಗರಿಕರಲ್ಲಿ ಬೇಸರವನ್ನುಂಟು ಮಾಡಿದೆ. ದೂರವಾಣಿ ತಂತಿಗಳು ಜೆಸಿಬಿಯ ಅಗೆತದಿಂದಾಗಿ ತುಂಡಾಗಿವೆ. ಸೂಕ್ಷ್ಮವಾದ ತಂತಿಗಳನ್ನು ಸಮರ್ಪಕವಾಗಿ ಮತ್ತೆ ಜೋಡಿಸುವುದು ಹರಸಾಹಸವೇ.
ಆದರೂ ಉರಿಬಿಸಿಲಲ್ಲಿ ಬಿಎಸ್ಎನ್ಎಲ್ನ ಸಿಬ್ಬಂದಿಗಳಾದ ನಾರಾಯಣ, ಧರ್ಣಪ್ಪ ಅವರ ತಂಡ ಕಳೆದೆರಡು ದಿನಗಳಿಂದ ತಂತಿಗಳನ್ನು ಜೋಡಿಸುವಲ್ಲಿ ನಿರತರಾಗಿದ್ದಾರೆ.ಪಂಚಾಯತ್ ಆಡಳಿತದ ನಿರ್ಲಕ್ಷ ಹಾಗು ಜೆಸಿಬಿ ಚಾಲಕನ ನಿಷ್ಕಾಳಜಿಯ ಪರಿಣಾಮ ಅಳದಂಗಡಿ ಸುತ್ತಮುತ್ತ ಕಳೆದೆರಡು ದಿನಗಳಿಂದ ದೂರವಾಣಿಗಳು ಸ್ತಬ್ದವಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.