ನವದೆಹಲಿ: ಕಾಂಗ್ರೆಸ್ ಆಡಳಿತದಲ್ಲಿ ಎಲ್ಲಾ ಯೋಜನೆಗಳಿಗೂ ಇಂದಿರಾ ಗಾಂಧಿ, ನೆಹರು, ರಾಜೀವ್ ಗಾಂಧಿ ಅವರುಗಳ ಹೆಸರನ್ನೇ ಇಡಲಾಗಿದೆ, ಇದೀಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಎಲ್ಲಾ ಯೋಜನೆಗಳ ಮರು ನಾಮಕರಣ ಕಾರ್ಯವನ್ನು ಆರಂಭಿಸಿದೆ.
ಇಂದಿರಾ ಆವಾಸ್ ಯೋಜನೆಗೆ ’ಪ್ರಧಾನ್ ಮಂತ್ರಿ ಗ್ರಾಮೀಣ್ ಆವಾಸ್ ಯೋಜನಾ’ ಎಂದು ಮರು ನಾಮಕರಣ ಮಾಡಿದೆ.
ಅಲ್ಲದೇ ಈ ಯೋಜನೆಗೆ ನೀಡಲಾಗುತ್ತಿದ್ದ ಅನುದಾನವನ್ನು ಏರಿಕೆ ಮಾಡಿದ್ದು, ಇದರ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ 1.20 ಲಕ್ಷ ರೂಪಾಯಿ ನೀಡಲಾಗುತ್ತದೆ. ಈ ಹಿಂದೆ 70 ಸಾವಿರ ರೂಪಾಯಿ ನೀಡಲಾಗಿತ್ತು.
ಪ್ರಸ್ತುತ ಶೌಚಾಲಯ ನಿರ್ಮಾಣಕ್ಕೆ 12 ಸಾವಿರ ಸಾಲ ನೀಡಲು ಈ ಯೋಜನೆಯನ್ವಯ ನಿರ್ಧರಿಸಲಾಗಿದೆ.
ಈ ಯೋಜನೆಯನ್ನು ರಾಜೀವ್ ಗಾಂಧೀ ಅವರು 1985ರಲ್ಲಿ ಇಂದಿರಾ ಹೆಸರಲ್ಲಿ ಆರಂಭಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.