ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು ಎಲ್ಪಿಜಿ ಸಬ್ಸಿಡಿಯನ್ನು ತೊರೆದವರ ಸಂಖ್ಯೆ ಇದೀಗ ಒಂದು ಕೋಟಿಗೆ ಏರಿಕೆಯಾಗಿದೆ.
ಇದೀಗ ಮೋದಿ ಸರ್ಕಾರ ಉಜ್ವಲ ಯೋಜನೆಯಡಿ ಅಡುಗೆ ಅನಿಲವನ್ನು ಹೊಂದಿರದ ಬಿಪಿಎಲ್ ಕುಟುಂಬಗಳಿಗೆ ಉಚಿತ ಎಲ್ಪಿಜಿಯನ್ನು ನೀಡಲು ಮುಂದಾಗಿದೆ. 3 ವರ್ಷದೊಳಗೆ ಈ ಕಾರ್ಯ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ.
2015ರ ಮಾರ್ಚ್ 27ರಂದು ಮೋದಿ ’ಗಿವ್ ಇಟ್ ಅಪ್’ ಎಂಬ ಅಭಿಯಾನವನ್ನು ಆರಂಭಿಸಿದರು, ಆರ್ಥಿಕವಾಗಿ ಪ್ರಬಲವಾಗಿರುವ ಕುಟುಂಬಗಳು ಎಲ್ಪಿಜಿ ಸಬ್ಸಿಡಿಯನ್ನು ಸ್ವಯಂ ಪ್ರೇರಿತರಾಗಿ ತೊರೆಯುವಂತೆ ಮನವಿ ಮಾಡಿದರು. ಇದರಂತೆ 1 ಕೋಟಿ ಕುಟುಂಬ ಎಲ್ಪಿಜಿ ಸಬ್ಸಿಡಿಯನ್ನು ತೊರೆದಿದು ದೊಡ್ಡತನವನ್ನು ತೋರಿದೆ.
ಇದರಿಂದಾಗಿ ಸರ್ಕಾರ ಬಡವರಿಗೆ ಎಲ್ಪಿಜಿ ಉಚಿತವಾಗಿ ನೀಡುವ ಯೋಜನೆ ಹಾಕಿಕೊಳ್ಳಲು ಸಾಧ್ಯವಾಗಿದೆ. ಈ ಹಣಕಾಸು ವರ್ಷದಲ್ಲಿ 1.5 ಕೋಟಿ ಬಿಪಿಎಲ್ ಕುಟುಂಬಗಳಿಗೆ ಉಚಿತ ಎಲ್ಪಿಜಿ ನೀಡುವ ಕಾರ್ಯ ಆರಂಭವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.