ಬೆಂಗಳೂರು : ಸಿರಗನಹಳ್ಳಿಯಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ನಡೆದ ಗಲಭೆ ಪ್ರಕರಣಕ್ಕೆ ಸಂಬ್ಬಂಧಿಸಿದಂತೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ನಾನು ಎ.28 ರಂದು ಸಿಎಂ ಮನೆಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬ್ಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರಮುಖ ಕಾರಣ ಎಂದು ಅವರು ಅವರು ಆರೋಪಿಸಿದ್ದಾರೆ. ದಲಿತರ ದೇಗುಲ ಪ್ರವೇಶ ಸಂಬ್ಬಂಧಿಸಿದಂತೆ ವಿಚಾರವನ್ನು ಕುಳಿತು ಬಗ್ಗೆಹರಿಸಬಹುದಿತ್ತು. ಅಲ್ಲದೇ ಇದಕ್ಕಾಗಿ ಪೊಲೀಸ್ ಇಲಾಖೆ ಮತ್ತು ಉಸ್ತುವಾರಿ ಸಚಿವರು ಸಭೆನಡೆಸಿ ಗೊಂದಲ ಪರಿಹರಿಸಬಹುದಿತ್ತು.
ಆದರೆ ಈ ವಿಚಾರವನ್ನಿಟ್ಟು ದ್ವೇಷವನ್ನು ಬಿತ್ತಲಾಗಿದೆ. ಪ್ರಕರಣಕ್ಕೆ ಸಂಬ್ಬಂಧಿಸಿದಂತೆ ಹಲವರನ್ನು ಬಂಧಿಸಿಲಾಗಿತ್ತು. 75 ವರ್ಷಪ್ರ್ರಾಯದ ಮುದುಕಿಯರನ್ನು ಬಂಧಿಸಲಾಗಿದೆ. ಈ ವಿಷಯಗಳಿಂದ ಹಾಸನದಲ್ಲಿ ಅರಾಜಕತೆ ಸೃಷ್ಟಿಯಾದಂತಾಗಿದ್ದು, ತನ್ನು ಕುಟಿಂಬದ ಮೇಲೆ ಆರೋಪವನ್ನು ಹೋರಿಸಲಾಗುತ್ತಿದೆ. ಈ ಬಗ್ಗೆ ಸತ್ಯಾಸತ್ಯತೆ ತಿಳಿಯಬೇಕಾದರೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸ ಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸರಕಾರ ಈಬಗ್ಗೆ ಅಸಡ್ಡೆ ವಹಿಸಿದರೆ ತಾನು ಸಿಎಂ ಮನೆ ಮುಂದೆ ಧರಣಿನಡೆಸಬೇಕಾಗುತ್ತದೆ ಎಂದು ಅವರು ಹೇಳಿದ್ದು, ಈ ಘಟನೆ ತನಿಖೆ ಆದೇಶಿಸುವ ವರೆಗೂ ತಾನು ಸಂಸತ್ತಿಗೆ ತೆರಳುದಿಲ್ಲ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.