ಮುಂಬಯಿ: ಇನ್ಕ್ರೆಡಿಬಲ್ ಇಂಡಿಯಾ ಯೋಜನೆಗೆ ರಾಯಭಾರಿಯಾಗಿ ತನ್ನನ್ನು ನೇಮಿಸುವ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂಬ ಬಗ್ಗೆ ಕೇಳಿ ಬಂದಿರುವ ವಿವಾದಗಳಿಗೆ ತೆರೆ ಎಳೆಯಲು ಅಮಿತಾಭ್ ಬಚ್ಚನ್ ಮುಂದಾಗಿದ್ದಾರೆ.
ರಾಯಾಭಾರಿಯಾಗುವಂತೆ ಕೋರಿ ಇದುವರೆಗೆ ಅಧಿಕೃತವಾಗಿ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ಅಮಿತಾಭ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾದುವುಗಳು ಎಂದು ಅವರು ಹೇಳಿದ್ದಾರೆ.
ಪನಾಮ ಪೇಪರ್ಸ್ ಲೀಕ್ ಮಾಡಿದ ತೆರಿಗೆ ವಂಚಕರ ಪಟ್ಟಿಯಲ್ಲಿ ಅಮಿತಾಭ್ ಅವರ ಹೆಸರೂ ಕೇಳಿ ಬಂದಿದ್ದು, ಈ ಹಿನ್ನಲೆಯಲ್ಲಿ ಅವರನ್ನು ರಾಯಭಾರಿಯನ್ನಾಗಿ ನೇಮಿಸುವ ಪ್ರಕ್ರಿಯೆಗೆ ಸರ್ಕಾರ ತಡೆ ನೀಡಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.