ಬೆಂಗಳೂರು: ಸೋಮವಾರ ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಬಿಬಿಎಂಪಿ ವಿಭಜನೆ ತಿದ್ದುಪಡಿ ವಿಧೇಯಕವನ್ನು ಮಂಡನೆಗೊಳಿಸಲಾಗಿದೆ.
ಬಿಬಿಎಂಪಿಯನ್ನು ವಿಭಜನೆ ಮಾಡುವ ಉದ್ದೇಶದಿಂದಲೇ ಇಂದು ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಇಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಸರ್ಕಾರದ ವಿರುದ್ಧ ನಿಂತರೂ ಪ್ರಯೋಜನವಾಗಲಿಲ್ಲ.
ವಿಧೇಯಕ ಮಂಡನೆಗೊಳಿಸಿದ ಆಡಳಿತಪಕ್ಷದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದ್ದು, ವಿಧಾನಸಭೆಯಲ್ಲಿ ತೀವ್ರ ಕೋಲಾಹಲವನ್ನು ಸೃಷ್ಟಿಸಿವೆ.
ಸಿಎಂ ವಿರುದ್ಧ ವಾಕ್ಸಮರ ನಡೆಸಿದ ಬಿಜೆಪಿ ‘ಸರ್ಕಾರದ ನಿರ್ಧಾರ ಅಭಿವೃದ್ಧಿಗೆ ಕಂಟಕ, ವಾರ್ಡುವಾರು ವಿಭಜನೆಗೊಳಿಸಲು ನಿರ್ಧರಿಸಿದ ಕ್ರಮ ಸರಿಯಲ್ಲ.
ಆದರೆ ವಿಭಜನೆಯನ್ನು ಸಮರ್ಥಿಸಿ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ‘ಅನೇಕ ವರ್ಷಗಳಿಂದ ಬಿಬಿಎಂಪಿ ಸಾಕಷ್ಟು ತಪ್ಪುಗಳನ್ನು ಮಾಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರನ್ನು ತಂದಿದೆ. ತಪ್ಪುಗಳನ್ನು ಸರಿಪಡಿಸಲು ವಿಭಜನೆಯ ನಿರ್ಧಾರಕೈಗೊಂಡಿದ್ದೇವೆ. ಕಳೆದ 5 ವರ್ಷದಲ್ಲಿ ಬಿಬಿಎಂಪಿ ಸಾಧನೆ ಶೂನ್ಯ, ಬೆಂಗಳೂರು ಅಭಿವೃದ್ಧಿಗೆ ಅದರ ಕೊಡುಗೆ ನಗಣ್ಯ’ ಎಂದರು.
‘ಅನಿರ್ವಾಯ ಸ್ಥಿತಿಯಲ್ಲಿ ವಿಭಜನೆ ಮಾಡಬೇಕಾಗಿದೆ. ಬೆಂಗಳೂರು ಒಂದು ಬ್ರ್ಯಾಂಡ್ ನೇಮ್ ಆಗಿ ಉಳಿಯಲಿದೆ ಆದರೆ ಆಡಳಿತ ಮಾತ್ರ ಮೂರು ಭಾಗಗಳಾಗಿ ನಡೆಯಲಿದೆ ಆಡಳಿತಾತ್ಮಕ ದೃಷ್ಟಿಯಿಂದ ವಿಭಜನೆ ಅಗತ್ಯ. ಇಲ್ಲಿ ಆಡಳಿತ ವಿಕೇಂದ್ರಿಕರಣ ಅಗತ್ಯ ಬಹಳಷ್ಟಿದೆ. 9 ಸಾವಿರ ಕೋಟಿ ಅಧಿಕ ಸಾಲದ ಹೊರೆ ಇದೆ, ವಿವಿಧ ಕಾಮಗಾರಿ ಪೂರ್ಣವೇ ಗೊಂಡಿಲ್ಲ’ ಎಂದರು.
ಜಯಚಂದ್ರ ಅವರ ಮಾತಿಗೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಸೂಪರ್ ಸೀಡ್ ಹೆಸರಿನಲ್ಲಿ ಸಂವಿಧಾನದ ಉಲ್ಲಂಘನೆ ಸಲ್ಲದು ಎಂದು ವಾದಿಸಿವೆ. ವಿಧೇಯಕದ ಪತ್ರಿಯನ್ನು ಹರಿದು ಪ್ರತಿಭಟನೆ ನಡೆಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.