ಶ್ರೀನಗರ: ಸ್ಥಳಿಯರ ತೀವ್ರ ಬೇಡಿಕೆಯ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದ ಹಂಡ್ವಾರದಲ್ಲಿನ ಹಲವು ಬಂಕರುಗಳ ಪೈಕಿ 3 ಬಂಕರುಗಳನ್ನು ತೆಗೆದು ಹಾಕಲು ಸೇನೆ ಮುಂದಾಗಿದೆ.
ಬಾಲಕಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಹಂಡ್ವಾರದಲ್ಲಿ ನಡೆದ ಉದ್ವಿಗ್ನ ಪರಿಸ್ಥಿತಿಯ ಬಳಿಕ ಈ ಬೆಳವಣಿಗೆ ನಡೆದಿದೆ.
ಸ್ಥಳಿಯರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಹಿಂಸಾಚಾರದ ಹಿನ್ನಲೆಯಲ್ಲಿ ಕಳೆದ ಒಂದು ವಾರಗಳಿಂದ ಅಲ್ಲಿ ಕರ್ಫ್ಯೂವನ್ನು ಹಾಕಲಾಗಿದೆ. ಹಿಂಸಾಚಾರದಲ್ಲಿ ಐವರು ನಾಗರಿಕರು ಮೃತರಾಗಿದ್ದಾರೆ.
ಇದೀಗ ಹಂಡ್ವಾರ ಚೌಕ್ನಲ್ಲಿದ್ದ ಆರ್ಮಿ ಬಂಕರ್ನ್ನು ತೆಗೆದು ಹಾಕಲು ನಿರ್ಧರಿಸಲಾಗಿದೆ. 20 ವರ್ಷಗಳಿಂದ ಈ ಬಂಕರ್ನ್ನು ತೆಗೆದು ಹಾಕುವಂತೆ ಸ್ಥಳಿಯರು ಒತ್ತಾಯಿಸುತ್ತಿದ್ದಾರೆ. ಆದರೆ ಯೋಧರಿಗೆ ಇದು ಅತ್ಯವಶ್ಯಕ ಎಂದು ಸೇನೆ ಹೇಳುತ್ತಾ ಬಂದಿತ್ತು. ಈ ಸಂಬಂಧ ಹಲವಾರು ಬಾರಿ ಹಿಂಸೆಗಳೂ ಸಂಭವಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.