ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರನ್ನು ಇನ್ಕ್ರೆಡಿಬಲ್ ಇಂಡಿಯಾದ ರಾಯಭಾರಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೀಗ ಆ ನಿರ್ಧಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ.
ಪನಾಮ ಪೇಪರ್ಸ್ನಲ್ಲಿ ಅಮಿತಾಭ್ ತೆರಿಗೆ ವಂಚಿಸಿದ ಬಗ್ಗೆ ವರದಿ ಪ್ರಕಟಗೊಂಡ ಹಿನ್ನಲೆಯಲ್ಲಿ ಸರ್ಕಾರ ಅವರನ್ನು ರಾಯಭಾರಿಯಾಗಿ ನೇಮಿಸುವ ಪ್ರಕ್ರಿಯೆಯನ್ನು ತಡೆಹಿಡಿದಿದೆ. ಅವರಿಗೆ ಕ್ಲೀನ್ಚಿಟ್ ದೊರೆತ ಬಳಿಕವಷ್ಟೇ ಪ್ರಕ್ರಿಯೆ ಮುಂದುವರೆಸಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಅಮೀರ್ ಖಾನ್ ಅವರ ರಾಯಭಾರಿ ಅವಧಿ ಕೊನೆಗೊಂಡ ಬಳಿಕ ಅಮಿತಾಭ್ ಅವರ ಹೆಸರನ್ನು ಕೇಂದ್ರ ಆ ಸ್ಥಾನಕ್ಕೆ ಘೋಷಿಸಿತ್ತು. ಈ ತಿಂಗಳಲ್ಲಿ ಅದು ಅಧಿಕೃತಗೊಳ್ಳಬೇಕಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.