ನವದೆಹಲಿ: ಸ್ವಾತಂತ್ರ್ಯ ಸೇನಾನಿ ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಡ್ರೈವರ್ ಆಗಿದ್ದ, ಆಜಾದ್ ಹಿಂದ್ ಫೌಝ್ ರಚನೆಯಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಿದ್ದ ಕೊಲೊನಿಯಲ್ ನಿಜಾಮುದ್ದೀನ್ ತನ್ನ 116ನೇ ವಯಸ್ಸಿನಲ್ಲಿ ಬ್ಯಾಂಕ್ ಅಕೌಂಟ್ ತೆರೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ನೇತಾಜೀಯವರ ಡ್ರೈವರ್ ಆಗಿದ್ದ ಇವರು ಉತ್ತರಪ್ರದೇಶದ ಅಜಂಘಢದ ಮುಬಾರಕ್ಪುರ್ ನಿವಾಸಿ. ತನ್ನ ಪತ್ನಿಯೊಂದಿಗೆ ಜಾಯಿಂಟ್ ಅಕೌಂಟ್ ತೆರೆಯುವ ಸಲುವಾಗಿ ಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ತಮ್ಮ ವೋಟರ್ ಐಡಿಯನ್ನು ಸಲ್ಲಿಕೆ ಮಾಡಿದ್ದಾರೆ.
1900ರಲ್ಲಿ ಹುಟ್ಟಿದ ನಿಜಾಮುದ್ದೀನ್ ಅಲಿಯಾಸ್ ಸೈಫುದ್ದೀನ್ ಇದೀಗ ಜಗತ್ತಿನಲ್ಲಿ ಬದುಕುತ್ತಿರುವ ಅತೀ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 114 ವರ್ಷ ವಯಸ್ಸಿನ ಜಪಾನಿನ ವ್ಯಕ್ತಿ ಮೃತರಾಗಿದ್ದು, ಅವರಿಗಿಂತಲೂ ಹೆಚ್ಚು ವರ್ಷ ಬದುಕಿದ ಕೀರ್ತಿ ಇವರದ್ದು.
ಅವರ ಪತ್ನಿ ಅಂಜುಬುನಿಷ ಅವರಿಗೆ 107 ವರ್ಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.