ಮಾಯಿಪ್ಪಾಡಿ : ಮಾಯಿಪ್ಪಾಡಿಯಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮ ಅಧ್ಯಾಪಕ ವಿದ್ಯಾರ್ಥಿನಿಯರಿಂದ ಯಕ್ಷಗಾನ ತಾಳಮದ್ದಳೆಯ ಸಾಹಿತ್ಯದ ಕುರಿತಾದ ಒಂದು ಸಂವಾದ ಮತ್ತು ಸಮರ ಸನ್ನಾಹ, ಭೀಷ್ಮ ಸೇನಾಧಿಪತ್ಯ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಪ್ರದರ್ಶನವು ನಡೆಯಿತು.
ಮೊದಲಿಗೆ ಕು. ಅಕ್ಷಿತಾ ಮಾಯಿಪ್ಪಾಡಿ ಯಕ್ಷಗಾನ ಪ್ರಸಂಗ ಸಾಹಿತ್ಯ ಮತ್ತು ತಾಳಮದ್ದಳೆಯ ಅರ್ಥಗಾರಿಕೆ ಆಶು ಸಾಹಿತ್ಯದ ಪ್ರತ್ಯೇಕತೆಗಳು ಹಾಗೂ ಕನ್ನಡ ಶಿಷ್ಟ ಭಾಷಾ ಸ್ವರೂಪವನ್ನು ಉಳಿಸುವಲ್ಲಿ ಯಕ್ಷಗಾನ ಕಲೆಯ ಪ್ರಾಧಾನ್ಯದ ಕುರಿತು ಕಿರು ಪ್ರಬಂಧ ಮಂಡಿಸಿದರು. ನಂತರ ವಿಶ್ವವಿನೋದ ಬನಾರಿ, ಎಂ ಶಂಕರ ರೈ ಮಾಸ್ತರ್, ಯತೀಶ್ ಕುಮಾರ್ ರೈ, ನಾರಾಯಣ ದೇಲಂಪಾಡಿ, ಎಂ ರಮಾನಂದ ರೈ, ಶಿವಪ್ರಸಾದ್ ಕಾಂತಾವರ ಮೊದಲಾದವರು ತಮ್ಮ ಅಭಿಪ್ರಾಯಗಳನ್ನೂ ಅನಿಸಿಕೆಗಳನ್ನೂ ವ್ಯಕ್ತಪಡಿಸಿದರು. ನಂತರ ದ್ವಿತೀಯ ವರ್ಷದ ಅಧ್ಯಾಪಕ ವಿದ್ಯಾರ್ಥಿನಿಯರಿಂದ ಸಮರ ಸನ್ನಾಹ,ಭೀಷ್ಮ ಸೇನಾಧಿಪತ್ಯ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆಯು ನಡೆಯಿತು.
ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಸಂಪೂರ್ಣ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ಶಿವಪ್ರಸಾದ್ ಕಾಂತಾವರ, ದಯಾನಂದ ಪಾಟಾಳಿ ಮಯ್ಯಾಳ, ವಿಷ್ಣು ಶರಣ ಬನಾರಿ ಮತ್ತು ನಾರಾಯಣ ಪಾಟಾಳಿ ಮಯ್ಯಾಳ ಹಾಗೂ ಪಾತ್ರವರ್ಗದಲ್ಲಿ ಅಧ್ಯಾಪಕ ವಿದ್ಯಾರ್ಥಿನಿಯರಾದ ಅನಿತಾ ಎಸ್, ಫೆವಿನಾ ಎಸ್ವಿ ಕ್ರಾಸ್ಟಾ, ಸುರೇಖಾ ಬಿ, ಜ್ಯೋತಿ ಸಿ ಎಚ್, ಮಮತಾ ಪಿ, ಶಾಂತಿಪ್ರಿಯಾ ಎಸ್, ಶ್ವೇತಾ ಕೆ, ಕಾವ್ಯಶ್ರೀ ಎಂ,ಪೂರ್ಣಿಮಾ ರೈ ಎಂ, ಸಚಿತಾ ರೈ ಬಿ, ರೂಪಶ್ರೀ ಕೆ, ಸುಶ್ಮಿತಾ ಎಂ ಆರ್ ಭಾಗವಹಿಸಿದರು. ಎಲ್ಲಾ ಪಾತ್ರಗಳನ್ನೂ ಅಧ್ಯಾಪಕ ವಿದ್ಯಾರ್ಥಿನಿಯರೇ ನಿರ್ವಹಿಸಿದ್ದು ಈ ಕಾರ್ಯಕ್ರಮದ ಪ್ರತ್ಯೇಕತೆಯಾಗಿತ್ತು. ನಂತರ ಎಂ ಶಂಕರ ರೈ ಮಾಸ್ತರ್ ಹಾಗೂ ಸಂಘದ ಸದಸ್ಯರ ಹಿಮ್ಮೇಳದಲ್ಲಿ ಶರಸೇತು ಎಂಬ ತಾಳಮದ್ದಳೆಯು ನಡೆಯಿತು.
ಪಾತ್ರವರ್ಗದಲ್ಲಿ ನಾರಾಯಣ ದೇಲಂಪಾಡಿ, ಎಂ ರಮಾನಂದ ರೈ ದೇಲಂಪಾಡಿ ಮತ್ತು ಯತೀಶ್ ಕುಮಾರ್ ರೈ ಮುಳ್ಳೇರಿಯ ಭಾಗವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಎಸ್ ವಿ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಡಯೆಟಿನ ಎಲ್ಲಾ ಅಧ್ಯಾಪಕ ವಿದ್ಯಾರ್ಥಿ ವಿದ್ಯಾರ್ಥಿನಿಯರು,ಅಧ್ಯಾಪಕರು ಮತ್ತು ಅನೇಕ ಕಲಾಭಿಮಾನಿಗಳೂ ಭಾಗವಹಿಸಿದ್ದ ಈ ಕಾರ್ಯಕ್ರಮಕ್ಕೆ ಕು. ಅಕ್ಷಿತಾ ಮಾಯಿಪ್ಪಾಡಿ ಸ್ವಾಗತಿಸಿ ಕು.ರಹಿಯಾನತ್ತ್ ರವರು ಧನ್ಯವಾದವನ್ನು ಸಮರ್ಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.